ಬೆಳ್ತಂಗಡಿ, ಮಾರ್ಚ್ 10, 2026 (ಕರಾವಳಿ ಟೈಮ್ಸ್) : ಯಾವುದೇ ಪರವಾನಿಗೆ ಹಾಗೂ ಸುರಕ್ಷತಾ ಕ್ರಮವಿಲ್ಲದೆ ಅಕ್ರಮವಾಗಿ ಡೀಸೆಲ್ ಸಂಗ್ರಹ ಪ್ರಕರಣ ಬೇಧಿಸಿದ ಪೊಲೀಸರು ಲಕ್ಷಾಂತರ ಮೌಲ್ಯದ ಡೀಸೆಲ್ ಸಹಿತ ಆರೋಪಿಯನ್ನು ಬಂಧಿಸಿದ ಘಟನೆ ಕಣಿಯೂರು ಗ್ರಾಮದ ಮುದಲ್ತಿಯಾರ್ ಎಂಬಲ್ಲಿ ಮಾ 9 ರಂದು ನಡೆದಿದೆ.
ಮಾ 9 ರಂದು ರಾತ್ರಿ ಬೆಳ್ತಂಗಡಿ ಉಪವಿಭಾಗದ ಪೆÇಲೀಸ್ ಉಪಾಧೀಕ್ಷಕಿ ರೋಹಿಣಿ ಸಿ ಕೆ ಅವರಿಗೆ ಬೆಳ್ತಂಗಡಿ ಕಣಿಯೂರು ಗ್ರಾಮದ ಮುದಲ್ತಿಯಾರ್ ಎಂಬಲ್ಲಿ ಅಕ್ರಮವಾಗಿ ಡೀಸೆಲನ್ನು ಬ್ಯಾರಲ್ ಮತ್ತು ಕ್ಯಾನ್ ಗಳಲ್ಲಿ ಶೇಖರಿಸಿಟ್ಟುರುವುದಾಗಿ ಮಾಹಿತಿ ಬಂದ ಮೇರೆಗೆ, ಉಪ್ಪಿನಂಗಡಿ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಪಿಎಸ್ಸೈ ಅವರನ್ನು ಬರಮಾಡಿ, ಮಾಹಿತಿ ಬಂದ ಸ್ಥಳಕ್ಕೆ ತೆರಳಿ ಆರೋಪಿ ಜಗದೀಶ್ (35) ಎಂಬಾತನ ಮನೆಯ ಸಮೀಪದ ಶೆಡ್ ತಪಾಸಣೆ ನಡೆಸಿದಾಗ, ಸುಮಾರು 200 ಲೀಟರ್ ಸಾಮರ್ಥ್ಯದ 20 ಬ್ಯಾರೆಲ್ ಗಳು ಹಾಗೂ ಸುಮಾರು 35 ಲೀಟರ್ ಸಾಮರ್ಥ್ಯದ 5 ಕ್ಯಾನ್ ಗಳಲ್ಲಿ ಒಟ್ಟು ಸುಮಾರು 4,175 ಲೀಟರ್ ಡೀಸೆಲ್ ತುಂಬಿಸಿರುವುದು ಕಂಡುಬಂದಿದೆ. ಸ್ಥಳದಲ್ಲಿ ಇನ್ನಷ್ಟು ಖಾಲಿ ಬ್ಯಾರೆಲ್ ಗಳು ಹಾಗೂ ಖಾಲಿ ಕ್ಯಾನ್ ಮತ್ತು ಇತರೆ ಸೊತ್ತುಗಳು ಪತ್ತೆಯಾಗಿರುತ್ತದೆ.
ಪತ್ತೆಯಾದ ಸೊತ್ತುಗಳ ಅಂದಾಜು ಮೌಲ್ಯ 3.50 ಲಕ್ಷ ರೂಪಾಯಿಗಳಾಗಿದ್ದು, ಪ್ರಕರಣದ ಆರೋಪಿ ಜಗದೀಶ್ ಎಂಬಾತನಲ್ಲಿ ಈ ಬಗ್ಗೆ ವಿಚಾರಿಸಿದಾಗ, ಇವುಗಳನ್ನು ಯಾವುದೇ ಪರವಾನಿಗೆ ಹೊಂದದೇ ಹಾಗೂ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಅಕ್ರಮವಾಗಿ ಡೀಸೆಲ್ ಶೇಖರಿಸಿಟ್ಟಿರುವುದು ತಿಳಿದುಬಂದಿದೆ. ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಪೆಟ್ರೋಲಿಯಂ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.














0 comments:
Post a Comment