ಸಮಸ್ತ ಪಬ್ಲಿಕ್ ಪರೀಕ್ಷೆ : ಕೊಡಾಜೆ, ಪಂತಡ್ಕ ಮದ್ರಗಳಿಗೆ ನೂರು ಶೇಕಡಾ ಫಲಿತಾಂಶ - Karavali Times ಸಮಸ್ತ ಪಬ್ಲಿಕ್ ಪರೀಕ್ಷೆ : ಕೊಡಾಜೆ, ಪಂತಡ್ಕ ಮದ್ರಗಳಿಗೆ ನೂರು ಶೇಕಡಾ ಫಲಿತಾಂಶ - Karavali Times

728x90

4 March 2026

ಸಮಸ್ತ ಪಬ್ಲಿಕ್ ಪರೀಕ್ಷೆ : ಕೊಡಾಜೆ, ಪಂತಡ್ಕ ಮದ್ರಗಳಿಗೆ ನೂರು ಶೇಕಡಾ ಫಲಿತಾಂಶ

ಬಂಟ್ವಾಳ, ಮಾರ್ಚ್ 05, 2026 (ಕರಾವಳಿ ಟೈಮ್ಸ್) : ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಅದೀನದಲ್ಲಿ ನಡೆದ 5, 7, ಮತ್ತು 10ನೇ ತರಗತಿಯ 2025-26ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ  ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧೀನದ ಕೊಡಾಜೆ ಮತ್ತು ಪಂತಡ್ಕ ತರ್ಬಿಯತುಲ್ ಇಸ್ಲಾಂ ಮದ್ರಸವು ಶೇಕಡ 100 ಫಲಿತಾಂಶ ದಾಖಲಿಸಿದೆ.

ಕೊಡಾಜೆ ಮದ್ರಸದ 64 ವಿದ್ಯಾರ್ಥಿಗಳು ಹಾಗೂ ಪಂತಡ್ಕ ಮದ್ರಸದ 8 ವಿದ್ಯಾರ್ಥಿಗಳ ಸಹಿತ ಒಟ್ಟು 72 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 6 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡರೆ, 26  ವಿದ್ಯಾರ್ಥಿಗಳು ಪ್ರಥಮ ಮತ್ತು 18 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಮಸೀದಿ ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಸಮಸ್ತ ಪಬ್ಲಿಕ್ ಪರೀಕ್ಷೆ : ಕೊಡಾಜೆ, ಪಂತಡ್ಕ ಮದ್ರಗಳಿಗೆ ನೂರು ಶೇಕಡಾ ಫಲಿತಾಂಶ Rating: 5 Reviewed By: karavali Times
Scroll to Top