ಅಕ್ರಮ ಕೋಳಿ ಅಂಕದ ಸ್ಥಳಕ್ಕೆ ಉಪ್ಪಿನಂಗಡಿ ಹಾಗೂ ಧರ್ಮಸ್ಥಳ ಪೊಲೀಸರ ಪ್ರತ್ಯೇಕ ದಾಳಿ : 10 ಮಂದಿ ವಶಕ್ಕೆ - Karavali Times ಅಕ್ರಮ ಕೋಳಿ ಅಂಕದ ಸ್ಥಳಕ್ಕೆ ಉಪ್ಪಿನಂಗಡಿ ಹಾಗೂ ಧರ್ಮಸ್ಥಳ ಪೊಲೀಸರ ಪ್ರತ್ಯೇಕ ದಾಳಿ : 10 ಮಂದಿ ವಶಕ್ಕೆ - Karavali Times

728x90

4 March 2026

ಅಕ್ರಮ ಕೋಳಿ ಅಂಕದ ಸ್ಥಳಕ್ಕೆ ಉಪ್ಪಿನಂಗಡಿ ಹಾಗೂ ಧರ್ಮಸ್ಥಳ ಪೊಲೀಸರ ಪ್ರತ್ಯೇಕ ದಾಳಿ : 10 ಮಂದಿ ವಶಕ್ಕೆ

ಮಂಗಳೂರು, ಮಾರ್ಚ್ 05, 2026 (ಕರಾವಳಿ ಟೈಮ್ಸ್) : ಉಪ್ಪಿನಂಗಡಿ ಹಾಗೂ ಧರ್ಮಸ್ಥಳ ಪೊಲೀಸರು ನಡೆಸಿದ ಪ್ರತ್ಯೇಕವಾಗಿ ಕೋಳಿ ಅಂಕಗಳಿಗೆ ದಾಳಿ ನಡೆಸಿ 10 ಮಂದಿಯನ್ನು ಬಂಧಿಸಿದ್ದಾರೆ. 

ಮಾ 3 ರಂದು ಸಂಜೆ ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸ್ಸೈ ಸುತೇಶ್ ಕೆ ಪಿ ನೇತೃತ್ವದ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿ ಬಜತ್ತೂರು ಗ್ರಾಮದ ಮಣಿಕ್ಕಳ ಎಂಬಲ್ಲಿ ತೆರಳುತ್ತಿದ್ದಾಗ, ರಸ್ತೆ ಬದಿ ಜೋರಾಗಿ ಶಬ್ದ ಕೇಳಿದ್ದು,  ಈ ಬಗ್ಗೆ ಪರಿಶೀಲಿಸಿದಾಗ, ಅಕ್ರಮ ಕೋಳಿ ಅಂಕ ನಡೆಯುತ್ತಿರುವುದು ಕಂಡುಬಂದಿದೆ. ಈ ಸಂದರ್ಭ ಸ್ಥಳಕ್ಕೆ ದಾಳಿ ನಡೆಸಿದಾಗ ಅಲ್ಲಿ ಗುಂಪು ಸೇರಿದ್ದ ಜನ ಓಡಿಹೋಗಿದ್ದು, ಮೂರು ಮಂದಿ ಆರೋಪಿಗಳಾದ ಕಡಬ ನಿವಾಸಿ ಸತೀಶ್ (38), ಬಂಟ್ವಾಳ ನಿವಾಸಿ ಮುರಳಿ (30) ಹಾಗೂ ಪುತ್ತೂರು ನಿವಾಸಿ ಮೋನಪ್ಪ ಕೆ (36) ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವರನ್ನು ವಿಚಾರಿಸಿದಾಗ ದೇರಣ್ಣ ಮತ್ತು ಉಮೇಶ್ ಎಂಬವರುಗಳು ಕೋಳಿ ಅಂಕ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. 

ದಾಳಿ ವೇಳೆ ಪೊಲೀಸರು ಸ್ಥಳದಲ್ಲಿದ್ದ ಐದು ಹುಂಜ ಕೋಳಿಗಳನ್ನು, ಎರಡು ಬಾಲುಗಳನ್ನು, ಆರೋಪಿಗಳು ಪಣವಾಗಿ ಇಟ್ಟಿದ್ದ ಒಟ್ಟು 2,300/- ರೂಪಾಯಿ ನಗದು ಹಣ ಹಾಗೂ ಒಂದು ಬೈಕನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇನ್ನೊಂದು ಪ್ರಕರಣದಲ್ಲಿ ಮಾ 4 ರಂದು ಬೆಳಿಗ್ಗೆ ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಕೀನ್ಯಾಜೆ ಎಂಬಲ್ಲಿ ಸರಕಾರಿ ಜಾಗದಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಧರ್ಮಸ್ಥಳ ಪೆÇಲೀಸ್ ಠಾಣಾ ಪಿಎಸ್ಸೈ ಸಮರ್ಥ ಆರ್ ಗಾಣಿಗೇರ ಅವರ ನೇತೃತ್ವದ ಪೊಲೀಸರು 7 ಮಂದಿ ಆರೋಪಿಗಳಾದ ಹರಿಶ್ಚಂದ್ರ (32), ರಮೇಶ ಕುಲಾಲ್ (46), ಸುಧಾಕರ (30), ಅಶೋಕ ಮಲೆಕುಡಿಯ (40), ಪುಷ್ಪರಾಜ್ (25), ಶ್ರೀಧರ ಕುಂಬಾರ (48), ಚೆನ್ನಪ್ಪ ಗೌಡ (70) ಎಂಬವರನ್ನು ಬಂಧಿಸಿದ್ದು, ಉಳಿದವರು ಓಡಿ ಪರಾರಿಯಾಗಿದ್ದಾರೆ. ಕೃತ್ಯದ ಸ್ಥಳದಲ್ಲಿದ್ದ 5 ಕೋಳಿಗಳನ್ನು ಮತ್ತು ಕೋಳಿಗಳ ಕಾಲಿಗೆ ಕಟ್ಟುವ 2 ಬಾಲುಗಳನ್ನು (ಸಣ್ಣಕತ್ತಿ) ಹಾಗೂ 970/- ರೂಪಾಯಿ ನಗದು ಹಣವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಕ್ರಮ ಕೋಳಿ ಅಂಕದ ಸ್ಥಳಕ್ಕೆ ಉಪ್ಪಿನಂಗಡಿ ಹಾಗೂ ಧರ್ಮಸ್ಥಳ ಪೊಲೀಸರ ಪ್ರತ್ಯೇಕ ದಾಳಿ : 10 ಮಂದಿ ವಶಕ್ಕೆ Rating: 5 Reviewed By: karavali Times
Scroll to Top