ಪುತ್ತೂರು, ಮಾರ್ಚ್ 05, 2026 (ಕರಾವಳಿ ಟೈಮ್ಸ್) : ದ್ವಿಚಕ್ರ ವಾಹನದಲ್ಲಿ ಬಂದು ವ್ಯಕ್ತಿಯೊಬ್ಬರಿಗೆ ಪಿಸ್ತೂಲು ತೋರಿಸಿ ಗುಂಡು ಹೊಡೆಯಲು ಯತ್ನಿಸಿದ ಘಟನೆ ಪುತ್ತೂರು ರಿಲಯನ್ಸ್ ಮಾಲ್ ಬಳಿ ಮಾ 2 ರಂದು ಮಧ್ಯಾಹ್ನ ಸಂಭವಿಸಿದ್ದು, ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಪುತ್ತೂರು ನಿವಾಸಿ ಮಹಮ್ಮದ್ ಶಫೀಕ್ (19) ಎಂದು ಹೆಸರಿಸಲಾಗಿದೆ. ಪುತ್ತೂರು ಕೆಮ್ಮಿಂಜೆ ನಿವಾಸಿ ಅಬ್ದುಲ್ ಹಕೀಂ (42) ಎಂಬವರು ಮಾ 2 ರಂದು ಮಧ್ಯಾಹ್ನ, ಪುತ್ತೂರಿನಿಂದ ಕೂರ್ನಡ್ಕಕ್ಕೆ ತನ್ನ ಕಾರಿನಲ್ಲಿ ಹೋಗುತ್ತಿದ್ದಾಗ, ಪುತ್ತೂರು ರಿಲ್ಯಾನ್ಸ್ ಮಾಲ್ ಬಳಿ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಬಂದ ಆರೋಪಿ ಹಕೀಂ ಅವರಿಗೆ ಪಿಸ್ತೂಲ್ ತೋರಿಸಿ ಗುಂಡು ಹೊಡೆಯಲು ಪ್ರಯತ್ನಿಸಿ ಬೆದರಿಸಿರುತ್ತಾನೆ. ಈ ವೇಳೆ ಹಕೀಂ ಹಾಗೂ ಇತರರು ಸೇರಿ ಆತನನ್ನು ಹಿಡಿಯಲು ಹೋದಾಗ ಆತ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದ. ಈ ಬಗ್ಗೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಆರೋಪಿ ಶಫೀಕ್ ಎಂಬಾತನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.


















0 comments:
Post a Comment