ಮತದಾರರ ಪಟ್ಟಿ ಮ್ಯಾಪಿಂಗ್ ಪ್ರಕ್ರಿಕೆಯೆಗೆ ಬಿ.ಎಲ್.ಒ.ಗಳಿಗೆ ಮಾಹಿತಿ ನೀಡಲು ಸೂಚನೆ - Karavali Times ಮತದಾರರ ಪಟ್ಟಿ ಮ್ಯಾಪಿಂಗ್ ಪ್ರಕ್ರಿಕೆಯೆಗೆ ಬಿ.ಎಲ್.ಒ.ಗಳಿಗೆ ಮಾಹಿತಿ ನೀಡಲು ಸೂಚನೆ - Karavali Times

728x90

4 March 2026

ಮತದಾರರ ಪಟ್ಟಿ ಮ್ಯಾಪಿಂಗ್ ಪ್ರಕ್ರಿಕೆಯೆಗೆ ಬಿ.ಎಲ್.ಒ.ಗಳಿಗೆ ಮಾಹಿತಿ ನೀಡಲು ಸೂಚನೆ

ಮಂಗಳೂರು, ಮಾರ್ಚ್ 05, 2026 (ಕರಾವಳಿ ಟೈಮ್ಸ್) : ಭಾರತ ಚುನಾವಣಾ ಆಯೋಗದಿಂದ ಕರ್ನಾಟಕ ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐ ಆರ್) ಘೋಷಣೆ ಶೀಘ್ರದಲ್ಲೆ ನಿರೀಕ್ಷಿಸಲಾಗಿರುವುದರಿಂದ, ಪೂರ್ವಭಾವಿ ಚಟುವಟಿಕೆಯಾದ ಮ್ಯಾಪಿಂಗ್ ಕಾರ್ಯ ಪ್ರಗತಿಯಲ್ಲಿದ್ದು, 2002 ರ ಮತದಾರರ ಪಟ್ಟಿಗೆ ಸಂಬಂಧಿಸಿದ ಈ ಕೆಳಕಂಡ ವಿವರಗಳನ್ನು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಬೂತ್ ಮಟ್ಟದ ಅಧಿಕಾರಿ (ಬಿ ಎಲ್ ಒ) ಗಳಿಗೆ ನೀಡಿ ಮ್ಯಾಪಿಂಗ್ ಮಾಡಿಕೊಳ್ಳಲು ಸೂಚಿಸಲಾಗಿದೆ. 

ಮ್ಯಾಪಿಂಗ್ ಅಂದರೆ 2002ರ ಮತದಾರರ ಪಟ್ಟಿಯನ್ನು 2025ರ ಮತದಾರರ ಪಟ್ಟಿಗೆ ಜೋಡನೆ ಮಾಡುವುದು. ಪ್ರೊಜೆನಿ (ಸಂತತಿ) ಮ್ಯಾಪಿಂಗ್ ಅಂದರೆ, 2002ರ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ನೋಂದಣಿಯಾಗದಿದ್ದಲ್ಲಿ ಅವರ ತಂದೆ/ ತಾಯಿ/ ಅಜ್ಜ/ ಅಜ್ಜಿಯವರ ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯೊಂದಿಗೆ ಜೋಡನೆ ಮಾಡಿಕೊಳ್ಳುವುದು. 

2002ರ ಮತದಾರರಾಗಿದ್ದಲ್ಲಿ ನೀವು 2002ರಲ್ಲಿ ವಾಸವಿದ್ದಂತಹ ವಿಧಾನಸಭಾ ಕ್ಷೇತ್ರದ ಹೆಸರು/ ಸಂಖ್ಯೆ, ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯನ್ನು ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿ (ಬಿ ಎಲ್ ಒ) ಅವರಿಗೆ ಮತದಾರರು ಮಾಹಿತಿ ನೀಡಿ ಸಹಕರಿಸುವಂತೆ ಕೋರಿದೆ. 

ಒಂದು ವೇಳೆ ನೀವು 2002ರಲ್ಲಿ ಮತದಾರರಾಗಿ ಇಲ್ಲದಿದ್ದಲ್ಲಿ, ನಿಮ್ಮ ತಂದೆ/ ತಾಯಿ/ ಅಜ್ಜ/ ಅಜ್ಜಿಯವರು ವಾಸವಿದ್ದಂತಹ ವಿಧಾನಸಭಾ ಕ್ಷೇತ್ರದ ಹೆಸರು/ ಸಂಖ್ಯೆ, ಭಾಗ ಸಂಖ್ಯೆ, ಹಾಗೂ ಕ್ರಮ ಸಂಖ್ಯೆಯನ್ನು ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಗಳಿಗೆ ಮತದಾರರು ಮಾಹಿತಿ ನೀಡಿ ಸಹಕರಿಸುವಂತೆ ಕೋರಿದೆ. 

ಮ್ಯಾಪಿಂಗ್ ಆಗದೇ ಇದ್ದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಸಮಯದಲ್ಲಿ ಮತದಾರರ ನೋಂದಣಾಧಿಕಾರಿ ಕಚೇರಿಯಿಂದ ಮ್ಯಾಪಿಂಗ್ ಆಗದೇ ಇರುವ ಮತದಾರರಿಗೆ ನೋಟೀಸ್ ನೀಡಲಾಗುತ್ತದೆ. ನೋಟೀಸ್ ನೀಡಿದ ನಂತರ ಜನ್ಮ ದಿನಾಂಕಕ್ಕೆ ಸಂಬಂಧಪಟ್ಟ ದಾಖಲೆಗಳು ಮತ್ತು ವಾಸ ಸ್ಥಳಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗಿರುತ್ತದೆ. ವಿಶೆಷ ಸಮಗ್ರ ಪರಿಷ್ಕರಣೆ ಸಮಯದಲ್ಲಿ ದಾಖಲೆಗಳನ್ನು ಸಲ್ಲಿಸದಿದ್ದಲ್ಲಿ ಅಂತವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುವುದು.

2002ರ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರುಗಳನ್ನು ಈ ಕೆಳಗಿನ ಲಿಂಕ್ ಮೂಲಕ ಹುಡುಕಬಹುದು.

https://ceo.karnataka.gov.in/search/en

ಅಥವಾ

https://voters.eci.gov.in/searchInSIR/S2UA4DPDF-JK4QWODSE

ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಯವರ ದೂರವಾಣಿ ಸಂಖ್ಯೆ ಪಡೆಯಲು ಈ ಕೆಳಗಿನ ಲಿಂಕ್ ಮೂಲಕ ಹುಡುಕಬಹುದು

https://electoralsearch.eci.gov.in/uesfmempmlkypo

ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಬೂತ್ ಮಟ್ಟದ ಅಧಿಕಾರಿಯವರು ಕರೆ ಸ್ವೀಕರಿಸದ್ದಿದಲ್ಲಿ ಈ ಕೆಳಗಿನ ಲಿಂಕ್ ಮೂಲಕ ಕರೆಯನ್ನು ಬುಕ್ ಮಾಡಬಹುದು (Book a Call with BLO)

https://voters.eci.gov.in/home/bookACallRequest ಎಂದು ಮಂಗಳೂರು ತಾಲೂಕು ತಹಶೀಲ್ದಾರರ ಕಚೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮತದಾರರ ಪಟ್ಟಿ ಮ್ಯಾಪಿಂಗ್ ಪ್ರಕ್ರಿಕೆಯೆಗೆ ಬಿ.ಎಲ್.ಒ.ಗಳಿಗೆ ಮಾಹಿತಿ ನೀಡಲು ಸೂಚನೆ Rating: 5 Reviewed By: karavali Times
Scroll to Top