ಅಕ್ರಮ ಕೋಳಿ ಅಂಕ ಸ್ಥಳಕ್ಕೆ ಮೂಡಬಿದ್ರೆ ಪೊಲೀಸರ ದಾಳಿ : 6 ಮಂದಿ ವಶಕ್ಕೆ - Karavali Times ಅಕ್ರಮ ಕೋಳಿ ಅಂಕ ಸ್ಥಳಕ್ಕೆ ಮೂಡಬಿದ್ರೆ ಪೊಲೀಸರ ದಾಳಿ : 6 ಮಂದಿ ವಶಕ್ಕೆ - Karavali Times

728x90

18 March 2026

ಅಕ್ರಮ ಕೋಳಿ ಅಂಕ ಸ್ಥಳಕ್ಕೆ ಮೂಡಬಿದ್ರೆ ಪೊಲೀಸರ ದಾಳಿ : 6 ಮಂದಿ ವಶಕ್ಕೆ

ಮಂಗಳೂರು, ಮಾರ್ಚ್ 19, ಮಾರ್ಚ್, 2026 (ಕರಾವಳಿ ಟೈಮ್ಸ್) : ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಮೂಡುಬಿದರೆ ಪೆÇಲೀಸ್ ಠಾಣಾ ಸರಹದ್ದಿನ ಮೂಡುಮೂರ್ನಾಡು ಗ್ರಾಮದ ಹೊಯಿಪಾಲಬೆಟ್ಟು ಎಂಬಲ್ಲಿ ಮಾರ್ಚ್ 18 ರಂದು ಶ್ರೀ ಕೋಡಮಣಿತ್ತಾಯ ಹಾಗೂ ಬ್ರಹ್ಮ ಬೈದರ್ಕಳ ವರ್ಷಾವಧಿ ಜಾತ್ರೆಯು ಮುಗಿದ ಬಳಿಕ ರಾಜೇಂದ್ರ ಪೂಜಾರಿ ಹಾಗೂ ರಾಜೇಶ್ ಬಲ್ಲಾಳ್ ಅವರ ನೇತೃತ್ವದಲ್ಲಿ ಕೆಲವು ವ್ಯಕ್ತಿಗಳು ಅಕ್ರಮವಾಗಿ ಸೇರಿಕೂಂಡು ಕೋಳಿಗಳಿಗೆ ಹರಿತವಾದ ಬಾಳ್ ಗಳನ್ನು ಕಟ್ಟಿ ಹಿಂಸಾತ್ಮಕವಾಗಿ ಕಾದಾಡಲು ಬಿಟ್ಟು ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿದ್ದು ಈ ಬಗ್ಗೆ ದಾಳಿ ನಡೆಸಿ ಕೋಳಿ ಅಂಕದಲ್ಲಿ ನಿರತರಾಗಿದ್ದ 6 ಜನ ಅರೋಪಿಗಳನ್ನು ಹಾಗೂ ಕೋಳಿ ಅಂಕದಲ್ಲಿ ಪಣಕ್ಕಿಟ್ಟಿದ್ದ 1,480/- ರೂಪಾಯಿ ಹಣವನ್ನು ಹಾಗೂ 17 ಜೀವಂತ ಹುಂಜಗಳು ಮತ್ತು ಕೋಳಿ ಅಂಕಕ್ಕೆ ಬಳಸುವ ಎರಡು ಬಾಲುಗಳನ್ನು ವಶಕ್ಕೆ ಪಡೆದು ದೈವಸ್ದಾನದ ವ್ಯವಸ್ದಾಪನಾ ಸಮಿತಿ ಹಾಗೂ ಅರೋಪಿಗಳ ಮೇಲೆ ಮೂಡಬಿದ್ರೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಕ್ರಮ ಕೋಳಿ ಅಂಕ ಸ್ಥಳಕ್ಕೆ ಮೂಡಬಿದ್ರೆ ಪೊಲೀಸರ ದಾಳಿ : 6 ಮಂದಿ ವಶಕ್ಕೆ Rating: 5 Reviewed By: karavali Times
Scroll to Top