ಮಂಗಳೂರು, ಎಪ್ರಿಲ್ 01, 2026 (ಕರಾವಳಿ ಟೈಮ್ಸ್) : ಕಳೆದ ಒಂಬತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆಸಾಮಿಯನ್ನು ಮಾರ್ಚ್ 29 ರಂದು ಉರ್ವಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಂಗಳೂರು-ಅಶೋಕ ನಗರದ ಬಿರಾ ಪೂಜಾರಿ ಕಂಪೌಂಡ್ ನಿವಾಸಿ ಸುಹಾನ್ ಅಲಿಯಾಸ್ ಸೋನು (33) ಎಂದು ಹೆಸರಿಸಲಾಗಿದೆ.
ಆರೋಪಿಯ ವಿರುದ್ದ ಉರ್ವ ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಒಟ್ಟು ಮೂರು ಪ್ರಕರಣಗಳು ದಾಖಲಾಗಿದ್ದು, ಉರ್ವ ಪೊಲೀಸ್ ಠಾಣಾ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಲಯವು ಆರೋಪಿಯ ವಿರುದ್ಧ ಎಲ್ ಪಿ ಸಿ ವಾರಂಟ್ ಹೊರಡಿಸಿದೆ.
ಆರೋಪಿಯನ್ನು ಮಾರ್ಚ್ 29 ರಂದು ಉರ್ವಾ ಪೆÇಲೀಸ್ ಠಾಣಾ ಎಎಸ್ಸೈ ಲಕ್ಷ್ಮಣ್ ನೇತೃತ್ವದ ಪೊಲೀಸ್ ತಂಡ ಮುಂಬೈಯಲ್ಲಿ ಪತ್ತೆಹಚ್ಚಿ ದಸ್ತಗಿರಿ ಮಾಡುವಲ್ಲಿ ಸಫಲವಾಗಿದೆ. ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.











0 comments:
Post a Comment