ಹಠಾತ್ ಅನಾರೋಗ್ಯದಿಂದ ನಫೀಸಾ ದೇರಳಕಟ್ಟೆ ನಿಧನ - Karavali Times ಹಠಾತ್ ಅನಾರೋಗ್ಯದಿಂದ ನಫೀಸಾ ದೇರಳಕಟ್ಟೆ ನಿಧನ - Karavali Times

728x90

25 March 2026

ಹಠಾತ್ ಅನಾರೋಗ್ಯದಿಂದ ನಫೀಸಾ ದೇರಳಕಟ್ಟೆ ನಿಧನ

ಮಂಗಳೂರು, ಮಾರ್ಚ್ 25, 2026 (ಕರಾವಳಿ ಟೈಮ್ಸ್) : ದೇರಳಕಟ್ಟೆ ಸಮೀಪದ ಬೆಳ್ಮ-ಬದ್ಯಾರ್ ನಿವಾಸಿ ಮರ್ ಹೂಂ ಬಿ ಇದ್ದಿನಬ್ಬ ಅವರ ಪತ್ನಿ ನಫೀಸಾ (57) ಅವರು ಹಠಾತ್ ಅನಾರೋಗ್ಯದಿಂದ ಬುಧವಾರ ನಿಧನರಾಗಿದ್ದಾರೆ. 

ರಂಝಾನ್ 28 ರಂದು ರಾತ್ರಿ ಹಠಾತ್ ಅನಾರೋಗ್ಯಕ್ಕೀಡಾದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಬುಧವಾರ ಪೂರ್ವಾಹ್ನ ನಿಧನ ಹೊಂದಿದರು. ಬುಧವಾರ ಸಂಜೆ ವೇಳೆಗೆ ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿಯಲ್ಲಿ ದಫನ ಕಾರ್ಯ ನೆರವೇರಿಸಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. 

ಮೃತರು ಎಸ್ಕೆಎಸ್ಸೆಸ್ಸೆಫ್ ವಿಖಾಯ ಸಕ್ರಿಯ ಕಾರ್ಯಕರ್ತ ಮುಹಮ್ಮದ್ ಜಾವೇದ್ ಸಹಿತ ನಾಲ್ವರು ಪುತ್ರರು, ಐದು ಮಂದಿ ಪುತ್ರಿಯರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಹಠಾತ್ ಅನಾರೋಗ್ಯದಿಂದ ನಫೀಸಾ ದೇರಳಕಟ್ಟೆ ನಿಧನ Rating: 5 Reviewed By: karavali Times
Scroll to Top