ಬಂಟ್ವಾಳ, ಮಾರ್ಚ್ 09, 2026 (ಕರಾವಳಿ ಟೈಮ್ಸ್) : ಸರಕಾರ ಇಂದು ಪ್ರತೀ ಗ್ರಾಮಮಟ್ಟದಲ್ಲೂ ರಸ್ತೆ ಅಭಿವೃದ್ದಿಗೆ ಅನುದಾನ ನೀಡುವ ಮೂಲಕ ಸುಸಜ್ಜಿತ ರಸ್ತೆ ವ್ಯವಸ್ಥೆಗೆ ಅವಕಾಶ ಕಲ್ಪಿಸುತ್ತಿದೆ, ಈ ಹಿನ್ನಲೆಯಲ್ಲಿ ಗ್ರಾಮಮಟ್ಟದಲ್ಲೂ ರಸ್ತೆಗಳು ಅಭಿವೃದ್ದಿಯಾಗುತ್ತಿದೆ. ಬಂಟ್ವಾಳ ತಾಲೂಕು ಪುದು ಗ್ರಾಮದ ಕಡೆಗೋಳಿ ಎಂಬಲ್ಲಿಂದ ತಿರುವು ಪಡೆಯುತ್ತಿರುವ ಬೆಂಜನಪದವು ಸಂಪರ್ಕದ ರಸ್ತೆಯ ಮಧ್ಯೆ ನೆತ್ರಕೆರೆ ಎಂಬಲ್ಲಿ ಈಗಾಗಲೇ ರಸ್ತೆ ಅಭಿವೃದ್ದಿಯಾಗಿ ಸುಸಜ್ಜಿತಗೊಂಡಿದ್ದರೂ ಇಲ್ಲಿನ ಕಿರು ಸೇತುವೆಯೊಂದು ಇನ್ನೂ ಓಬಿರಾಯನ ಕಾಲದ್ದೇ ಇದೆ. ರಸ್ತೆ ಅಗಲವಿದ್ದರೂ ಸೇತುವೆ ಮಾತ್ರ ಕಿರಿದಾಗಿರುವ ಪರಿಣಾಮ ವಾಹನಗಳ ಸಂಚಾರಕ್ಕೆ ಅನಾನುಕೂಲವಾಗುತ್ತಿದೆ. ಎದುರು-ಬದುರು ವಾಹನ ಸಂಚಾರ ಸಂದರ್ಭ ಒಂದು ಬದಿಯ ವಾಹನ ಸೇತುವೆಯಲ್ಲಿ ಸಂಚರಿಸುವ ವೇಳೆ ಇನ್ನೊಂದು ಬದಿಯಲ್ಲಿ ಬರುವ ವಾಹನ ಕಾಯಬೇಕಾದ ಪರಿಸ್ಥಿತಿ ಇದೆ.
ಈ ರಸ್ತೆಯಲ್ಲಿ ರೂಟ್ ಬಸ್ಸುಗಳು ಹಾಗೂ ಕೆಲವೊಂದು ಖಾಸಗಿ ಕಾಲೇಜುಗಳಿಗೆ ಸೇರಿದ ಬಸ್ಸುಗಳ ಸಹಿತ ಹಲವು ಘನ-ಲಘು ವಾಹನಗಳು ನಿತ್ಯವೂ ಸಂಚರಿಸುತ್ತಿದ್ದು, ಇದರಿಂದ ಇಲ್ಲಿನ ಹಳೆ ಕಾಲದ ಕಿರು ಸೇತುವೆ ಅಭಿವೃದ್ದಿಯಾಗದೆ ತೊಂದರೆಯಾಗಿದೆ ಎನ್ನುವ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಇಲ್ಲಿನ ಕಿರು ಸೇತುವೆ ಅಭಿವೃದ್ದಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.













0 comments:
Post a Comment