ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಗೊಂದಲ ನಿವಾರಣೆ ಸಹಾಯವಾಣಿ ಆರಂಭ - Karavali Times ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಗೊಂದಲ ನಿವಾರಣೆ ಸಹಾಯವಾಣಿ ಆರಂಭ - Karavali Times

728x90

3 March 2026

ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಗೊಂದಲ ನಿವಾರಣೆ ಸಹಾಯವಾಣಿ ಆರಂಭ

ಮಂಗಳೂರು, ಮಾರ್ಚ್ 03, 2026 (ಕರಾವಳಿ ಟೈಮ್ಸ್) : ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಪರೀಕ್ಷಾ ಸಂಬಂಧಿ ಯಾವುದೇ ಸಮಸ್ಯೆ, ಪರೀಕ್ಷಾ ಸಿದ್ಧತೆ ಬಗ್ಗೆ ಭಯ, ಆತಂಕ, ಗೊಂದಲಗಳಿದ್ದರೆ ದೂರವಾಣಿ ಸಂಖ್ಯೆ 0824-2451239ಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದು. 

ಸಹಾಯವಾಣಿ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 10.30 ರಿಂದ ಸಂಜೆ 5, ಭಾನುವಾರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1ರವರೆಗೆ ಕಾರ್ಯನರ್ವಹಿಸಲಿದೆ. ಸಹಾಯವಾಣಿಯಲ್ಲಿ ಸ್ವೀಕರಿಸುವ ವಿಷಯ ಸಮಸ್ಯೆ ಮತ್ತು ಕರೆ ಮಾಡಿದ ದೂರವಾಣಿ ಸಂಖ್ಯೆ ದಾಖಲಿಸಿ ಇಟ್ಟುಕೊಳ್ಳಲಾಗುತ್ತದೆ. ಮರುದಿನ ಕರೆ ಮಾಡಿದವರಿಗೆ ಸಹಾಯವಾಣಿಯಿಂದಲೇ ಕರೆ ಮಾಡಿ ಉತ್ತರ/ ಪರಿಹಾರವನ್ನು ನೀಡಲಾಗುತ್ತದೆ. ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಈ ಸಹಾಯವಾಣಿ ವ್ಯವಸ್ಥೆಗೊಳಿಸಲಾಗಿದ್ದು ತಜ್ಞರ ನೆರವಿನಲ್ಲಿ ಪರಿಹಾರ ತಿಳಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಗೊಂದಲ ನಿವಾರಣೆ ಸಹಾಯವಾಣಿ ಆರಂಭ Rating: 5 Reviewed By: karavali Times
Scroll to Top