ಸಾಗರದ ಬಿ.ಎಚ್. ರಸ್ತೆಯ ಡಿವೈಡರ್ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಸಾಮಾಜಿಕ ಕಾರ್ಯಕರ್ತ ಜಮೀಲ್ ಸಾಗರ್ ಮನವಿ - Karavali Times ಸಾಗರದ ಬಿ.ಎಚ್. ರಸ್ತೆಯ ಡಿವೈಡರ್ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಸಾಮಾಜಿಕ ಕಾರ್ಯಕರ್ತ ಜಮೀಲ್ ಸಾಗರ್ ಮನವಿ - Karavali Times

728x90

25 March 2026

ಸಾಗರದ ಬಿ.ಎಚ್. ರಸ್ತೆಯ ಡಿವೈಡರ್ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಸಾಮಾಜಿಕ ಕಾರ್ಯಕರ್ತ ಜಮೀಲ್ ಸಾಗರ್ ಮನವಿ

ಸಾಗರ, ಮಾರ್ಚ್ 25, 2026 (ಕರಾವಳಿ ಟೈಮ್ಸ್) : ನಗರದ ಪ್ರಮುಖ ರಸ್ತೆಯಾದ ಬಿ.ಎಚ್. ರಸ್ತೆಯಲ್ಲಿ ನಿರ್ಮಿಸಲಾಗುತ್ತಿರುವ ಡಿವೈಡರ್ ಗಳಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಡಿವೈಡರ್ ತೆರವುಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತ ಹಾಗೂ ಯುವ ಮುಖಂಡ ಜಮೀಲ್ ಸಾಗರ್ ಅವರು ಪೆÇಲೀಸ್ ಉಪಾಧೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ.

ಜಮೀಲ್ ಸಾಗರ್ ಅವರು ಪೊಲೀಸರಿಗೆ ನೀಡಿರುವ ಮನವಿ ಪತ್ರದಲ್ಲಿ ಮೂರು ಮುಖ್ಯ ಬೇಡಿಕೆಗಳನ್ನು ಪೆÇಲೀಸ್ ಇಲಾಖೆಯ ಮುಂದಿಟ್ಟಿದ್ದಾರೆ

ಶರಾವತಿ ಮೆಡಿಕಲ್ ಮುಂಭಾಗ : ಇಲ್ಲಿ ಎರಡೂ ಬದಿ ಕ್ರಾಸ್ ರಸ್ತೆಗಳಿರುವುದರಿಂದ, ಸುಗಮ ಸಂಚಾರಕ್ಕಾಗಿ ಡಿವೈಡರ್ ಅನ್ನು ತೆರವುಗೊಳಿಸಬೇಕು. 

ಟಿ.ವಿ.ಎಸ್. ಶೋರೂಂ ಮುಂಭಾಗ : ಟಿ.ವಿ.ಎಸ್ ಶೋರೂಂನಿಂದ ಬಿಲಾಲಿಯಾ ಮೈದಾನಕ್ಕೆ (ನೆಹರೂ ಮೈದಾನ) ಹೋಗುವ ರಸ್ತೆಯ ಎದುರು ಇರುವ ಡಿವೈಡರ್ ಅನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತೆಗೆಯಬೇಕು.

ಯುನೈಟೆಡ್ ಪೆಟ್ರೋಲ್ ಬಂಕ್ ಹತ್ತಿರ : ಪೆಟ್ರೋಲ್ ಬಂಕ್ ಎದುರು ಅರ್ಧಕ್ಕೆ ನಿಂತಿರುವ ಡಿವೈಡರ್ ಕಾಮಗಾರಿಯನ್ನು ಶಿವಪ್ಪ ನಾಯಕ ಸರ್ಕಲ್ ವರೆಗೆ ಮುಂದುವರಿಸಬೇಕು.

ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗದಂತೆ ಶೀಘ್ರವಾಗಿ ಕ್ರಮಕೈಗೊಳ್ಳುವಂತೆ ಜಮೀಲ್ ಸಾಗರ್ ಅವರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಸಾಗರದ ಬಿ.ಎಚ್. ರಸ್ತೆಯ ಡಿವೈಡರ್ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಸಾಮಾಜಿಕ ಕಾರ್ಯಕರ್ತ ಜಮೀಲ್ ಸಾಗರ್ ಮನವಿ Rating: 5 Reviewed By: karavali Times
Scroll to Top