ನರಿಕೊಂಬು : ಅಟೋ ರಿಕ್ಷಾ ಚಾಲಕ ಹಠಾತ್ ಎದೆ ನೋವು ಕಾಣಿಸಿ ಕುಸಿದು ಬಿದ್ದು ಮೃತ್ಯು - Karavali Times ನರಿಕೊಂಬು : ಅಟೋ ರಿಕ್ಷಾ ಚಾಲಕ ಹಠಾತ್ ಎದೆ ನೋವು ಕಾಣಿಸಿ ಕುಸಿದು ಬಿದ್ದು ಮೃತ್ಯು - Karavali Times

728x90

31 March 2026

ನರಿಕೊಂಬು : ಅಟೋ ರಿಕ್ಷಾ ಚಾಲಕ ಹಠಾತ್ ಎದೆ ನೋವು ಕಾಣಿಸಿ ಕುಸಿದು ಬಿದ್ದು ಮೃತ್ಯು

ಬಂಟ್ವಾಳ, ಮಾರ್ಚ್ 31, 2026 (ಕರಾವಳಿ ಟೈಮ್ಸ್) : ಅಟೋ ರಿಕ್ಷಾ ಚಾಲಕ ವೃತ್ತಿಯ ವ್ಯಕ್ತಿಯೋರ್ವರು ಹಠಾತ್ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟ ಘಟನೆ ನರಿಕೊಂಬು ಗ್ರಾಮದಲ್ಲಿ ಮಾ 28 ರಂದು ಸಂಭವಿಸಿದೆ. 

ಮೃತರನ್ನು ಸ್ಥಳೀಯ ನಿವಾಸಿ ಗಣೇಶ (48) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಅವರ ಪತ್ನಿ ಶ್ರೀಮತಿ ಅಮಿತಾ (40) ಅವರು ಪೊಲೀಸರಿಗೆ ದೂರು ನೀಡಿದ್ದು, ಆಟೋ ಚಾಲಕರಾಗಿ ಕೆಲಸ ಮಾಡಿಕೊಂಡಿರುವ ಪತಿ ಗಣೇಶ್ ಅವರು ಮಾ 28ರಂದು ಬೆಳಿಗ್ಗೆ ಆಟೋ ರಿಕ್ಷಾದಲ್ಲಿ ಕೆಲಸಕ್ಕೆಂದು ಹೋಗುತ್ತಿರುವ ಸಮಯ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದವರನ್ನು ಮನೆಗೆ ಕರೆದುಕೊಂಡು ಹೋಗಿ ಕುರ್ಚಿಯಲ್ಲಿ ಕುಳ್ಳಿರಿಸಿ ಮಾತಾಡಿಸಿದಾಗ ಮಾತಾಡದೇ ಇದ್ದು ತಕ್ಷಣ ಮಾವ ಗಣಪತಿ ಹಾಗೂ ಮಾಧವ ಅವರನ್ನು ಕರೆಸಿ ಆರೈಕೆ ಮಾಡಿದಾಗ ಅವರು ಮಾತಾಡದೇ ಇದ್ದುದನ್ನು ಕಂಡು ನೆರೆಯ ಆಟೋ ಚಾಲಕ ಸುರೇಶ ಅವರ ರಿಕ್ಷಾದಲ್ಲಿ ತುಂಬೆ ಫಾದರ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ನೀಡಿರುವ ದೂರಿನಂತೆ ಈ ಬಗ್ಗೆ ಬಂಟ್ವಾಳ ನಗರ ಪೆÇೀಲಿಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ನರಿಕೊಂಬು : ಅಟೋ ರಿಕ್ಷಾ ಚಾಲಕ ಹಠಾತ್ ಎದೆ ನೋವು ಕಾಣಿಸಿ ಕುಸಿದು ಬಿದ್ದು ಮೃತ್ಯು Rating: 5 Reviewed By: karavali Times
Scroll to Top