ಸರಪಾಡಿ : ತೆಂಗಿನ ಮರದಿಂದ ಆಕಸ್ಮಿಕವಾಗಿ ಬಿದ್ದು ವ್ಯಕ್ತಿ ಮೃತ್ಯು - Karavali Times ಸರಪಾಡಿ : ತೆಂಗಿನ ಮರದಿಂದ ಆಕಸ್ಮಿಕವಾಗಿ ಬಿದ್ದು ವ್ಯಕ್ತಿ ಮೃತ್ಯು - Karavali Times

728x90

9 March 2026

ಸರಪಾಡಿ : ತೆಂಗಿನ ಮರದಿಂದ ಆಕಸ್ಮಿಕವಾಗಿ ಬಿದ್ದು ವ್ಯಕ್ತಿ ಮೃತ್ಯು

 ಬಂಟ್ವಾಳ, ಮಾರ್ಚ್ 09, 2026 (ಕರಾವಳಿ ಟೈಮ್ಸ್) : ತೆಂಗಿನ ಮರದಿಂದ ಕಾಯಿ ಕೀಳುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಸರಪಾಡಿ ಗ್ರಾಮದ ಹೊಸಲಚ್ಚಿಲ ಎಂಬಲ್ಲಿನ ಜಮೀನಿನಲ್ಲಿ ಮಾ 7 ರಂದು ಸಂಭವಿಸಿದೆ. 

ಮೃತರನ್ನು ಸರಪಾಡಿ ಗ್ರಾಮದ ನಿವಾಸಿ ಪದ್ಮನಾಭ ಪೂಜಾರಿ (56) ಎಂದು ಹೆಸರಿಸಲಾಗಿದೆ. ಇವರು ಸರಪಾಡಿ ಹೊಸಲಚ್ಚಿಲ ಎಂಬಲ್ಲಿನ ಜಮೀನಿನಲ್ಲಿ ಇರುವ ತೆಂಗಿನ ಮರಕ್ಕೆ ಹತ್ತಿ ತೆಂಗಿನ ಕಾಯಿ ಕೀಳುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆಳಕ್ಕೆ ಬಿದ್ದಿದ್ದಾರೆ. ಘಟನೆಯಿಂದ ಇವರ ಕೈಗಳು ಹಾಗೂ ಎದೆಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೃತರ ಪುತ್ರ ರಂಜಿತ್ ಅವರು ನೀಡಿದ ದೂರಿನಂತೆ  ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸರಪಾಡಿ : ತೆಂಗಿನ ಮರದಿಂದ ಆಕಸ್ಮಿಕವಾಗಿ ಬಿದ್ದು ವ್ಯಕ್ತಿ ಮೃತ್ಯು Rating: 5 Reviewed By: karavali Times
Scroll to Top