ಕಡಬ, ಮಾರ್ಚ್ 19, 2026 (ಕರಾವಳಿ ಟೈಮ್ಸ್) : ತಲೆ ನೋವಿಗೆಂದು ಮನೆಯಲ್ಲಿದ್ದ ಔಷಧಿ ಸೇವಿಸಿದ್ದ 10 ವರ್ಷ ಪ್ರಾಯದ ಬಾಲಕ ಅನಾರೋಗ್ಯಕ್ಕೀಡಾಗಿ ಮೃತಪಟ್ಟ ಘಟನೆ ಕಡಬ ತಾಲೂಕಿನ ರಾಮಕುಂಜ ಎಂಬಲ್ಲಿ ಮಾ 18 ರಂದು ಸಂಭವಿಸಿದೆ.
ಈ ಬಗ್ಗೆ ಬಾಲಕನ ತಂದೆ ಸಂಜೀವ ಪೂಜಾರಿ (50) ಅವರು ಕಡಬ ಪೊಲೀಸರಿಗೆ ದೂರು ನೀಡಿದ್ದು, ಇವರ 10 ವರ್ಷ ಪ್ರಾಯದ ಮಗನಿಗೆ ಪದೇಪದೇ ತಲೆನೋವು ಬರುತ್ತಿದ್ದು, ಮಾ 18 ರಂದು ಸಂಜೆ ಮಗ ತಲೆನೋವಿಗೆಂದು ಮನೆಯಲ್ಲಿದ್ದ ಔಷಧಿಯನ್ನು ಸೇವಿಸಿ ಮನೆಯಲ್ಲಿ ಹೊರಳಾಡುತ್ತಿರುವುದಾಗಿ ಪತ್ನಿ ತಿಳಿಸಿದ ಮೇರೆಗೆ ಕೂಡಲೇ ಮನೆಗೆ ಬಂದು ಮಗನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದೊಯ್ದಿದ್ದಾರೆ. ಆದರೆ ಅದಾಗಲೇ ಬಾಲಕ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕಡಬ ಪೆÇಲೀಸ್ ಠಾಣೆಯಲ್ಲಿ ಯು ಡಿ ಆರ್ ಪ್ರಕರಣ ದಾಖಲಾಗಿದೆ.












0 comments:
Post a Comment