ಬೆಳ್ತಂಗಡಿ, ಮಾರ್ಚ್ 19, 2026 (ಕರಾವಳಿ ಟೈಮ್ಸ್) : ಸ್ನೇಹಿತರ ಜೊತೆ ಸೇರಿ ದೇವಸ್ಥಾನದ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಪ್ರಾಯದ ಮುಸ್ಲಿಂ ವಿದ್ಯಾರ್ಥಿ ಮೇಲೆ ಮೋರಲ್ ಪೊಲೀಸಿಂಗ್ ನಡೆಸಿ ಗುಂಪು ಹಲ್ಲೆಗೈದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಬೆಳ್ತಂಗಡಿ ಪೆÇಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ವಿದ್ಯಾ ಸಂಸ್ಥೆಯಲ್ಲಿ ಕಲಿಯುತ್ತಿರುವ ಅಪ್ರಾಪ್ತ ಪ್ರಾಯದ (17 ವರ್ಷ) ಬಾಲಕನು ಮಾರ್ಚ್ 11ರಂದು ಸಂಜೆ ತನ್ನ ಶಾಲಾ ಸ್ನೇಹಿತರೊಂದಿಗೆ ಜಾತ್ರೆಗೆ ತೆರಳಿರುತ್ತಾನೆ. ಈ ವೇಳೆ ಜಾತ್ರಾ ಸ್ಥಳದಲ್ಲಿದ್ದ ಕೆಲವರು ತಮ್ಮ ಧರ್ಮದ ಹುಡುಗಿಯರೊಂದಿಗೆ ಅನ್ಯ ಧರ್ಮದ ಬಾಲಕನು ಜಾತ್ರೆಗೆ ಬಂದಿರುವುದಾಗಿ ಅಕ್ಷೇಪಿಸಿ, ಬಾಲಕಗೆ ಹಲ್ಲೆ ನಡೆಸಿ ನಿಂದಿಸಿರುತ್ತಾರೆ ಹಾಗೂ ಸದ್ರಿ ಬಾಲಕನನ್ನು ಅಲ್ಲಿಂದ ಬೈಕಿನಲ್ಲಿ ದೂರ ಕರೆತಂದು ಹಲ್ಲೆ ನಡೆಸಿ, ಬಾಲಕನಿಂದ ತಾನೇ ಜಾತ್ರಾ ಸ್ಥಳದಲ್ಲಿ ತಪ್ಪು ಮಾಡಿರುವುದಾಗಿ ವಿಡಿಯೋ ಹೇಳಿಕೆ ದಾಖಲಿಸಿಕೊಂಡು ಆತನನ್ನು ಕಳುಹಿಸಿರುತ್ತಾರೆ. ಘಟನೆಯಿಂದ ಬಾಲಕ ಕೆಲ ದಿನಗಳಿಂದ ಭಯಭೀತನಾಗಿರುತ್ತಾನೆ ಎಂಬುದಾಗಿ ಬಾಲಕನ ತಂದೆ ಮಾರ್ಚ್ 18 ರಂದು ನೀಡಿದ ದೂರಿನಂತೆ ಈ ಬಗ್ಗೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 30/2026, ಕಲಂ 137(2), 115(2), 351(2) , 352, 353(2) ಜೊತೆಗೆ 190 ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.












0 comments:
Post a Comment