ಕಲ್ಲಡ್ಕ ಸರಕಾರಿ ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣಕ್ಕೆ ಎಂ.ಆರ್.ಪಿ.ಎಲ್. ಕಂಪೆನಿಯಿಂದ 48 ಲಕ್ಷ ರೂಪಾಯಿ ಹಣಕಾಸು ನೆರವು ಮಂಜೂರು - Karavali Times ಕಲ್ಲಡ್ಕ ಸರಕಾರಿ ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣಕ್ಕೆ ಎಂ.ಆರ್.ಪಿ.ಎಲ್. ಕಂಪೆನಿಯಿಂದ 48 ಲಕ್ಷ ರೂಪಾಯಿ ಹಣಕಾಸು ನೆರವು ಮಂಜೂರು - Karavali Times

728x90

7 April 2026

ಕಲ್ಲಡ್ಕ ಸರಕಾರಿ ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣಕ್ಕೆ ಎಂ.ಆರ್.ಪಿ.ಎಲ್. ಕಂಪೆನಿಯಿಂದ 48 ಲಕ್ಷ ರೂಪಾಯಿ ಹಣಕಾಸು ನೆರವು ಮಂಜೂರು

ಬಂಟ್ವಾಳ, ಎಪ್ರಿಲ್ 07, 2026 (ಕರಾವಳಿ ಟೈಮ್ಸ್) : ಕಲ್ಲಡ್ಕ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಕೊಠಡಿಗಳ ನಿರ್ಮಾಣಕ್ಕಾಗಿ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂ ಆರ್ ಪಿ ಎಲ್) ಸಂಸ್ಥೆಯು 48 ಲಕ್ಷ ರೂಪಾಯಿಗಳ ಹಣಕಾಸು ನೆರವು ಮಂಜೂರು ಮಾಡಿದೆ. 

ವಿಧಾನ ಪರಿಷತ್ ಸದಸ್ಯ ಡಾ ಮಂಜನಾಥ ಭಂಡಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಶಿಫಾರಸ್ಸಿನಂತೆ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಮತ್ತು ಶಾಲಾ ಮುಖ್ಯೋಪಾಧ್ಯಾಯರ ಮನವಿ ಮೇರೆಗೆ ಎಂ ಆರ್ ಪಿ ಎಲ್ ಸಂಸ್ಥೆ ಈ ಹಣಕಾಸಿನ ನೆರವು ಮಂಜೂರು ಮಾಡಿದೆ ಎಂದು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಮಧುಸೂಧನ್ ಐತಾಳ್ ಅವರು ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಕಲ್ಲಡ್ಕ ಸರಕಾರಿ ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣಕ್ಕೆ ಎಂ.ಆರ್.ಪಿ.ಎಲ್. ಕಂಪೆನಿಯಿಂದ 48 ಲಕ್ಷ ರೂಪಾಯಿ ಹಣಕಾಸು ನೆರವು ಮಂಜೂರು Rating: 5 Reviewed By: karavali Times
Scroll to Top