ಸಜಿಪನಡು : ಮಲಗಿದ್ದಲ್ಲಿಂದ ಎದ್ದೇಳುವಾಗ ಎದೆ ನೋವು ಕಾಣಿಸಿಕೊಂಡು ವ್ಯಕ್ತಿ ಮೃತ್ಯು - Karavali Times ಸಜಿಪನಡು : ಮಲಗಿದ್ದಲ್ಲಿಂದ ಎದ್ದೇಳುವಾಗ ಎದೆ ನೋವು ಕಾಣಿಸಿಕೊಂಡು ವ್ಯಕ್ತಿ ಮೃತ್ಯು - Karavali Times

728x90

7 April 2026

ಸಜಿಪನಡು : ಮಲಗಿದ್ದಲ್ಲಿಂದ ಎದ್ದೇಳುವಾಗ ಎದೆ ನೋವು ಕಾಣಿಸಿಕೊಂಡು ವ್ಯಕ್ತಿ ಮೃತ್ಯು

ಬಂಟ್ವಾಳ, ಎಪ್ರಿಲ್ 07, 2026 (ಕರಾವಳಿ ಟೈಮ್ಸ್) : ರಾತ್ರಿ ಮಲಗಿದ್ದ ವ್ಯಕ್ತಿಗೆ ಬೆಳಗ್ಗೆ ಎದ್ದೇಳುವಾಗ ಎದೆ ನೋವು ಕಾಣಿಸಿಕೊಂಡು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಸಜಿಪನಡು ಗ್ರಾಮದ ಕೋಲಮಜಲು ಎಂಬಲ್ಲಿ ಎ 6 ರಂದು ಬೆಳಿಗ್ಗೆ ವರದಿಯಾಗಿದೆ. 

ಮೃತರನ್ನು ಇಲ್ಲಿನ ನಿವಾಸಿ ನವೀನಾಕ್ಷ ಎಂದು ಹೆಸರಿಸಲಾಗಿದೆ. ಈ ಬಗ್ಗೆ ಮೃತರ ಸಹೋದರ ಕಮಾಲಾಕ್ಷ,. (40) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರ ತಮ್ಮ ನವೀನಾಕ್ಷ ಎ 5 ರಂದು ಎಂದಿನಂತೆಯೇ ರಾತ್ರಿ 10 ಗಂಟೆ ಊಟ ಮಾಡಿ ಮಲಗಿದ್ದು ಬೆಳಿಗ್ಗೆ 7 ಗಂಟೆಗೆ ಎದ್ದಾಗ ತನಗೆ ಎದೆನೋವು ಆಗುತ್ತಿದೆಯೆಂದು ಬೊಬ್ಬೆ ಹೊಡೆಯುತ್ತಿದ್ದನು. ಕೂಡಲೇ ನವೀನಾಕ್ಷನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲೆಂದು ಮನೆಯಿಂದ ಹೊರಡುವಾಗಲೇ ನವೀನಾಕ್ಷನು ರಕ್ತ ವಾಂತಿ ಮಾಡಿರುತ್ತಾನೆ. ತಕ್ಷಣ ಆತನನ್ನು ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಹೃದಯಾಘಾತ ಅಥವಾ ಇನ್ನಾವುದೋ ಖಾಯಿಲೆಯಿಂದ ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸಜಿಪನಡು : ಮಲಗಿದ್ದಲ್ಲಿಂದ ಎದ್ದೇಳುವಾಗ ಎದೆ ನೋವು ಕಾಣಿಸಿಕೊಂಡು ವ್ಯಕ್ತಿ ಮೃತ್ಯು Rating: 5 Reviewed By: karavali Times
Scroll to Top