ಬಂಟ್ವಾಳ, ಎಪ್ರಿಲ್ 13, 2026 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಬಿ ಸಿ ರೋಡು ಪಟ್ಟಣದ ಡಾ ಅಂಬೇಡ್ಕರ್ ಭವನದ ಆವರಣದ ಬಳಿ ಮೊಟ್ಟೆ ಸಿಪ್ಪೆ ಸಹಿತ ಇರುವ ತ್ಯಾಜ್ಯ ರಾಶಿ ಎಸೆಯಲಾಗಿರುವ ಬಗ್ಗೆ ಭಾನುವಾರ ಪತ್ರಿಕೆಯಲ್ಲಿ ಪ್ರಕಟಗೊಂಡ ಸಚಿತ್ರ ವರದಿಗೆ ತಕ್ಷಣ ಸ್ಪಂದಿಸಿದ ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರು ಸೋಮವಾರವೇ ಪುರಸಭಾ ಪೌರ ಕಾರ್ಮಿಕರ ಮೂಲಕ ಸ್ವಚ್ಛಗೊಳಿಸಲು ಕ್ರಮ ಕೈಗೊಂಡಿದ್ದಾರೆ.
ಬಿ ಸಿ ರೋಡಿನ ತಾಲೂಕು ಪಂಚಾಯತ್ ಕಚೇರಿಯ ರಸ್ತೆಯ ಅಂಬೇಡ್ಕರ್ ಭವನದ ಆವರಣ ಗೋಡೆಯ ಹೊರ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಮೊಟ್ಟೆ ಸಿಪ್ಪೆ ಸಹಿತ ಇರುವ ತ್ಯಾಜ್ಯದ ರಾಶಿ ಹಾಕಿರುವುದು ಕಂಡು ಬಂದಿದ್ದು, ಈ ಬಗ್ಗೆ ಭಾನುವಾರ ಕರಾವಳಿ ಟೈಮ್ಸ್ ಸಚಿತ್ರ ವರದಿ ಪ್ರಕಟಿಸಿ ಪುರಸಭಾಧಿಕಾರಿಗಳ ಗಮನ ಸೆಳೆದಿತ್ತು.
ಎಪ್ರಿಲ್ 14 ರಂದು ಮಂಗಳವಾರ (ಇಂದು) ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ಇದೇ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿರುವ ಹಿನ್ನಲೆಯಲ್ಲಿ ತ್ಯಾಜ್ಯ ಶುಚೀಕರಣಕ್ಕೆ ಜನ ಆಗ್ರಹಿಸಿದ್ದ ಬಗ್ಗೆ ಪತ್ರಿಕೆಗೆ ಗಮನ ಸೆಳೆದಿತ್ತು. ತಕ್ಷಣ ಸ್ಪಂದಿಸಿದ ಪುರಸಭಾ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರು ಪುರಸಭಾ ಪೌರ ಕಾರ್ಮಿಕರ ಮೂಲಕ ತ್ಯಾಜ್ಯವನ್ನು ಸ್ವಚ್ಛಗೊಳಿಸಿದ್ದಲ್ಲೆದೆ ಅಂಬೇಡ್ಕರ್ ಭವನದ ಒಳಭಾಗವನ್ನೂ ಶುಚೀಕರಣಕ್ಕೆ ಕ್ರಮ ಕೈಗೊಂಡು ಜನ ಹಿತ ಕಾಪಾಡಿದ್ದಾರೆ.




















0 comments:
Post a Comment