ಮಂಗಳೂರು, ಎಪ್ರಿಲ್ 14, 2026 (ಕರಾವಳಿ ಟೈಮ್ಸ್) : ತೊಕ್ಕೊಟ್ಟು ಫ್ಲೈ ಓವರ್ ಮೇಲೆ ನಡೆದ ಆರಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಿಫ್ ಮೇಲೆ ಕಳೆದ ಫೆಬ್ರವರಿ 13 ರಂದೇ ಹತ್ಯೆಗೆ ಸಂಚು ರೂಪಿಸಿ ಅದರಲ್ಲಿ ತಂಡ ವಿಫಲರಾಗಿದ್ದರು ಎಂಬುದನ್ನು ತನಿಖೆ ವೇಳೆ ಪತ್ತೆ ಹಚ್ಚಿರುವ ಪೊಲೀಸರು ಒಟ್ಟಾರೆ ಕೊಲೆ ಕೃತ್ಯಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅರ್ಶದ್, ಪುಚೆ ನಿಸಾಕ್ ಹಾಗೂ ಜುನೈದ್ ಎಂದು ಹೆಸರಿಸಲಾಗಿದೆ. ಆರೋಪಿ ಅರ್ಷದ್ ಪಿತೂರಿಯಲ್ಲಿ ಭಾಗಿಯಾಗಿದ್ದ, ಶಸ್ತ್ರಾಸ್ತ್ರಗಳು, ಪೆÇಲೀಸರ ಚಲನವಲನ, ಸಾರಿಗೆ ಮತ್ತು ಹಣವನ್ನು ಆರೋಪಿಗಳಿಗೆ ಒದಗಿಸಿದ್ದಾನೆ. ಪುಚೆ ನಿಸಾಕ್ ಫೆಬ್ರವರಿಯಲ್ಲಿ ಆರಿಫ್ ಮೇಲಿನ ಪ್ರಯತ್ನದಲ್ಲಿ ಭಾಗಿಯಾಗಿದ್ದ. 2022 ರಲ್ಲಿ ನಡೆದ ದಾಳಿ ವೇಳೆಯೂ ಭಾಗಿಯಾಗಿದ್ದ. ಜುನೈದ್ ಆರೋಪಿಗಳಿಗೆ ವಾಹನ ಒದಗಿಸಿದ್ದ. ಅಲ್ಲದೆ ಫೆಬ್ರವರಿಯಲ್ಲಿ ನಡೆದ ಕೊಲೆಯತ್ನದಲ್ಲೂ ಭಾಗಿಯಾಗಿದ್ದ ಎನ್ನಲಾಗಿದ್ದು, ಕೃತ್ಯದಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದು, ಅವರೆಲ್ಲರ ಬಂಧನದ ಬಳಿಕ ವಿವರಗಳನ್ನು ಮಾಧ್ಯಮಗಳು ತಿಳಿಸಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.


















0 comments:
Post a Comment