ಮಾರ್ನಬೈಲ್ : ಅಟೋ ರಿಕ್ಷಾ ಡಿಕ್ಕಿ ಹೊಡೆದು ತಂದೆ-ಮಗಳಿಗೆ ಗಾಯ - Karavali Times ಮಾರ್ನಬೈಲ್ : ಅಟೋ ರಿಕ್ಷಾ ಡಿಕ್ಕಿ ಹೊಡೆದು ತಂದೆ-ಮಗಳಿಗೆ ಗಾಯ - Karavali Times

728x90

14 April 2026

ಮಾರ್ನಬೈಲ್ : ಅಟೋ ರಿಕ್ಷಾ ಡಿಕ್ಕಿ ಹೊಡೆದು ತಂದೆ-ಮಗಳಿಗೆ ಗಾಯ

ಬಂಟ್ವಾಳ, ಎಪ್ರಿಲ್ 14, 2026 (ಕರಾವಳಿ ಟೈಮ್ಸ್) : ಅಟೋ ರಿಕ್ಷಾ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ತಂದೆ-ಮಗಳು ಗಾಯಗೊಂಡ ಘಟನೆ ಮಾರ್ನಬೈಲು ಜಂಕ್ಷನ್ ಬಳಿ ಎಪ್ರಿಲ್ 12 ರಂದು ರಾತ್ರಿ ಸಂಭವಿಸಿದೆ. 

ಗಾಯಗೊಂಡವರನ್ನು ಕರಿಂಗಾನ ನಿವಾಸಿ ವಿಕ್ಟರ್ ಡಿ ಸೋಜ (62) ಹಾಗೂ ಅವರ ಪುತ್ರಿ ವಿನೀಶ್ ಜೆನ್ನಿಫರ್ ಡಿ ಸೋಜಾ ಎಂದು ಹೆಸರಿಸಲಾಗಿದೆ. ವಿಕ್ಟರ್ ಡಿ ಸೋಜ ಅವರು ಎ 12 ರಂದು ತಮ್ಮ ಮಗಳು ವಿನೀಶ್ ಜೆನ್ನಿಫರ್ ಡಿ ಸೋಜಾಳನ್ನು ಬೆಂಗಳೂರಿಗೆ ಕಳುಹಿಸುವರೇ ಮಾರ್ನಬೈಲ್ ಜಂಕ್ಷನ್ ಬಳಿ ರಸ್ತೆ ದಾಟುತ್ತಿರುವ ಸಮಯ ರಾತ್ರಿ 10.05 ಗಂಟೆಗೆ ಮೆಲ್ಕಾರ್ ಕಡೆಯಿಂದ ಸಜಿಪ ಕಡೆಗೆ ನಾಸೀರ್ ಎಂಬವರು ಚಲಾಯಿಸಿಕೊಂಡು ಬಂದ ಅಟೋ ರಿಕ್ಷಾ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. 

ಅಪಘಾತದಿಂದ ಗಾಯಗೊಂಡ ತಂದೆ ಮಗಳನ್ನು ಸಾರ್ವಜನಿಕರು ಉಪಚರಿಸಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಮಾರ್ನಬೈಲ್ : ಅಟೋ ರಿಕ್ಷಾ ಡಿಕ್ಕಿ ಹೊಡೆದು ತಂದೆ-ಮಗಳಿಗೆ ಗಾಯ Rating: 5 Reviewed By: karavali Times
Scroll to Top