ಬಂಟ್ವಾಳ, ಎಪ್ರಿಲ್ 15, 2026 (ಕರಾವಳಿ ಟೈಮ್ಸ್) : ಮೀನಿನ ಟೆಂಪೋಗೆ ಕಾರು ಡಿಕ್ಕಿ ಹೊಡೆದು ಟೆಂಪೋ ಚಾಲಕನ ಕಾಲು ಮುರಿತಗೊಂಡ ಘಟನೆ ಗೋಳ್ತಮಜಲು ಗ್ರಾಮದ ಎರ್ಮೆಮಜಲು ಎಂಬಲ್ಲಿ ಎಪ್ರಿಲ್ 14 ರಂದು ಮಧ್ಯಾಹ್ನ ವೇಳೆ ಸಂಭವಿಸಿದೆ.
ಗಾಯಗೊಂಡ ಟೆಂಪೋ ಚಾಲಕನನ್ನು ಕಲ್ಲಡ್ಕ ನಿವಾಸಿ ಇಸಾಕ್ ಎಂದು ಹೆಸರಿಸಲಾಗಿದೆ. ಇವರು ಟೆಂಪೋದಲ್ಲಿ ಮೀನಿನ ವ್ಯಾಪಾರ ಮಾಡಿಕೊಂಡು ವಿಟ್ಲ ಕಡೆಯಿಂದ ಕಲ್ಲಡ್ಕ-ಕಾಂಞಂಗಾಡು ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವೇಳೆ ಎರ್ಮೆಮಜಲು ಎಂಬಲ್ಲಿಗೆ ತಲುಪುವಾಗ ಕಲ್ಲಡ್ಕ ಕಡೆಯಿಂದ ಮಹಮ್ಮದ್ ಹಾಫಿಲ್ ಎಂಬವರು ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಟೆಂಪೋ ಚಾಲಕ ಇಸಾಕ್ ಅವರ ಎರಡು ಕಾಲುಗಳಿಗೆ ಮೂಲೆ ಮುರಿತ ಉಂಟಾಗಿದ್ದು, ಕಲ್ಲಡ್ಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಇಸಾಕ್ ಅಲ್ಲದೆ ಕಾರು ಚಾಲಕ ಹಾಗೂ ಓರ್ವ ಪ್ರಯಾಣಿಕಗೂ ಸಣ್ಣಪುಟ್ಟ ಗಾಯಗಳಾಗಿವೆ. ಅವರು ಕಲ್ಲಡ್ಕ ಪುಷ್ಪರಾಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment