ಬಂಟ್ವಾಳ, ಎಪ್ರಿಲ್ 08, 2026 (ಕರಾವಳಿ ಟೈಮ್ಸ್) : ಅಟೋ ರಿಕ್ಷಾ ಮಗುಚಿ ಬಿದ್ದು ಮಹಿಳೆಯೋರ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಪಂಥ ಗ್ರಾಮದ ಕುದ್ರಡ್ಕ ಬಳಿ ಎಪ್ರಿಲ್ 5 ರಂದು ಸಂಭವಿಸಿದೆ.
ಗಾಯಗೊಂಡ ಮಹಿಳೆಯನ್ನು ಮೂಲತಃ ಗೋಳ್ತಮಜಲು ಗ್ರಾಮದ ತೋಟ ನಿವಾಸಿ, ಪ್ರಸ್ತುತ ಕಾವಳಮೂಡೂರು ಗ್ರಾಮದ ಕಾವಳಕಟ್ಟೆ-ಕುರ್ಮಾಲು ಎಂಬಲ್ಲಿ ವಾಸವಾಗಿರುವ ದೇವಕಿ (64) ಎಂದು ಹೆಸರಿಸಲಾಗಿದೆ.
ಇವರು ತನ್ನ ಮಗಳು ನಳಿನಾಕ್ಷಿ ಹಾಗೂ ಇಬ್ಬರು ಮಕ್ಕಳೊಂದಿಗೆ ತನ್ನ ಅಳಿಯ ಯಶೋಧರ ಅವರು ಚಲಾಯಿಸುತ್ತಿದ್ದ ಅಟೋ ರಿಕ್ಷಾದಲ್ಲಿ ಕಾವಳಕಟ್ಟೆಯಿಂದ ಉಪ್ಪಿನಂಗಡಿಗೆ ತೆರಳುತ್ತಿದ್ದ ವೇಳೆ ತಣ್ಣೀರುಪಂಥ ಗ್ರಾಮದ ಕುದ್ರಡ್ಕ ಬಳಿ ಅಟೋ ರಿಕ್ಷಾ ಮಗುಚಿ ಬಿದ್ದು ಈ ಅಪಘಾತ ಸಂಭವಿಸಿದೆ.
ಗಾಯಗೊಂಡ ದೇವಕಿ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















0 comments:
Post a Comment