ಬಂಟ್ವಾಳ, ಎಪ್ರಿಲ್ 08, 2026 (ಕರಾವಳಿ ಟೈಮ್ಸ್) : ತಾಲೂಕಿನ ಉಳಿ ಹಾಗೂ ಬಡಗಕಜೆಕಾರು ಗ್ರಾಮ ಪಂಚಾಯತ್ ಸ್ವಾಧೀನದ ಕುಡಿಯುವ ನೀರಿನ ಸ್ಥಾವರದ ವಿದ್ಯುತ್ ವಾಹಕ ಕೇಬಲ್ ಕತ್ತರಿಸಿ ಕಳವುಗೈದ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಪ್ರಿಲ್ 6 ರ ಮಧ್ಯರಾತ್ರಿಯಿಂದ ಎಪ್ರಿಲ್ 7 ರ ಬೆಳಿಗ್ಗೆ 5 ಗಂಟೆಯ ಮಧ್ಯದ ಅವಧಿಯಲ್ಲಿ ಈ ಕಳವು ಕೃತ್ಯ ನಡೆದಿದೆ. ಈ ಬಗ್ಗೆ ಉಳಿ ಗ್ರಾಮ ಪಂಚಾಯತ್ ಪಿಡಿಒ ಹಾಗೂ ಬಡಗಕಜೆಕಾರು ಗ್ರಾಮ ಪಂಚಾಯತ್ ಪ್ರಭಾರ ಪಿಡಿಒ ಆಗಿರುವ ವಿಧ್ಯಾಶ್ರೀ ಕೆ ಅವರು ಪೊಲೀಸರಿಗೆ ದೂರು ನೀಡಿದ್ದು, ಎಪ್ರಿಲ್ 6 ರ ಮಧ್ಯರಾತ್ರಿಯಿಂದ ಎ 7 ರ ಬೆಳಗ್ಗಿನ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಉಳಿ ಗ್ರಾಮದ ಉಳಿ ಗ್ರಾಮ ಪಂಚಾಯತ್ ಸ್ವಾಧೀನದ ಪಂಚದುರ್ಗ ಹೈಸ್ಕೂಲ್ ಬಳಿಯ ಸಾರ್ವಜನಿಕ ಕುಡಿಯುವ ನೀರಿನ ಸ್ಥಾವರದ ಸುಮಾರು 7 ಸಾವಿರ ರೂಪಾಯಿ ಮೌಲ್ಯದ 4 ಎಂಎಂ ದಪ್ಪದ ಸುಮಾರು 35 ಮೀ ಉದ್ದದ ವಿದ್ಯುತ್ ವಾಹಕ ಕೇಬಲನ್ನು ಕತ್ತರಿಸಿ ಕಳವು ಮಾಡಲಾಗಿದ್ದು, ಅದೇ ರೀತಿ ತೆಂಕಕಾರಂದೂರು ಗ್ರಾಮದ ಬಡಗಕಜೆಕಾರು ಗ್ರಾಮ ಪಂಚಾಯತ್ ಸ್ವಾಧೀನದ ಕರ್ಲ ಶಾಲಾ ಬಳಿಯ ಕುಡಿಯುವ ನೀರಿನ ಸ್ಥಾವರದ ಸುಮಾರು 20 ಸಾವಿರ ರೂಪಾಯಿ ಮೌಲ್ಯದ 4 ಎಂಎಂ ದಪ್ಪದ ಸುಮಾರು 100 ಮೀಟರ್ ಉದ್ದದ ವಿದ್ಯುತ್ ವಾಹಕ ಕೇಬಲನ್ನು ಕತ್ತರಿಸಿ ಕಳವು ಮಾಡಲಾಗಿದೆ ಎಂದು ನೀಡಿರುವ ದೂರಿನಂತೆ ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















0 comments:
Post a Comment