ಬೆಂಗಳೂರು, ಎಪ್ರಿಲ್ 08, 2026 (ಕರಾವಳಿ ಟೈಮ್ಸ್) : ಎಪ್ರಿಲ್ 9 ರಂದು ಗುರುವಾರ (ನಾಳೆ) ಅಪರಾಹ್ನ 3 ಗಂಟೆಗೆ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಲಿದೆ. ಮೊದಲು ಇಲಾಖಾ ವೆಬ್ ಸೈಟಿನಲ್ಲಿ ಫಲಿತಾಂಶ ಲಭ್ಯವಾಗಲಿದ್ದು, ಬಳಿಕ ಸಚಿವರಿಂದ ಸುದ್ದಿಗೋಷ್ಠಿ ನಡೆಯಲಿದೆ.
ಈ ಹಿಂದೆ ಮೊದಲು ಸುದ್ದಿಗೋಷ್ಠಿ ನಡೆಸಿ ಬಳಿಕ ಫಲಿತಾಂಶ ಪ್ರಕಟವಾಗುತ್ತಿತ್ತು. ಆದರೆ ಈ ಬಾರಿ ಮೊದಲು ವೈಬ್ ಸೈಟಿನಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ಸುದ್ದಿಗೋಷ್ಠಿ ನಡೆಯಲಿದೆ. ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಈ ಬದಲಾವಣೆ ಮಾಡಲಾಗಿದ್ದು, ಸಂಜೆ 6.15ಕ್ಕೆ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಇಲಾಖಾ ವೆಬ್ ಸೈಟ್ https://karresults.nic.in ಫಲಿತಾಂಶ ಲಭ್ಯವಾಗಲಿದೆ. ಜೊತೆಗೆ Karnatakaone ಮೊಬೈಲ್ ಆಪ್ ಮೂಲಕ ಫಲಿತಾಂಶ ಪಡೆಯಬಹುದು ಹಾಗೂ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ, ವಾಟ್ಸಪ್, ಎಸ್ ಎಂ ಎಸ್ ಮೂಲಕವೂ ಫಲಿತಾಂಶ ರವಾನೆಯಾಗಲಿದೆ.
ಈ ವರ್ಷ ಇದೇ ಮೊದಲ ಬಾರಿಗೆ ಡಿಜಿ ಲಾಕರ್ ಮೂಲಕ ಫಲಿತಾಂಶ ದಿನವೇ ವಿದ್ಯಾರ್ಥಿಗಳ ಅಂಕಪಟ್ಟಿ ಲಭ್ಯವಾಗಲಿದೆ. ನಾಳೆ ಮಧ್ಯಾಹ್ನ 3 ಗಂಟೆಗೆ ಅಂಕಪಟ್ಟಿ ಡಿಜಿ ಲಾಕರಿನಲ್ಲಿ ಲಭ್ಯವಿರಲಿದೆ. https://www.digilocker.gov.in/ ಬಳಸಿ ಅಂಕಪಟ್ಟಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಅಪರಾಹ್ನ 3 ಗಂಟೆ ನಂತರ ಕಾಲೇಜುಗಳಿಗೆ ಫಲಿತಾಂಶ ಪಟ್ಟಿ ರವಾನೆಯಾಗಲಿದೆ. ಫೆಬ್ರವರಿ 28 ರಿಂದ ಮಾರ್ಚ್ 17ವರೆಗೆ ಪರೀಕ್ಷೆ ನಡೆದಿತ್ತು. ಸುಮಾರು 7.10 ಲಕ್ಷ ವಿದ್ಯಾರ್ಥಿಗಳು 1217 ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು.


















0 comments:
Post a Comment