ಸಮ ಸಮಾಜ ನಿರ್ಮಾಣಕ್ಕೆ ಬಸವಣ್ಣ ನಡೆಸಿದ ಹೋರಾಟ ಸ್ತುತ್ಯರ್ಹ : ಉಪತಹಶೀಲ್ದಾರ್ ನರೇಂದ್ರನಾಥ್ - Karavali Times ಸಮ ಸಮಾಜ ನಿರ್ಮಾಣಕ್ಕೆ ಬಸವಣ್ಣ ನಡೆಸಿದ ಹೋರಾಟ ಸ್ತುತ್ಯರ್ಹ : ಉಪತಹಶೀಲ್ದಾರ್ ನರೇಂದ್ರನಾಥ್ - Karavali Times

728x90

20 April 2026

ಸಮ ಸಮಾಜ ನಿರ್ಮಾಣಕ್ಕೆ ಬಸವಣ್ಣ ನಡೆಸಿದ ಹೋರಾಟ ಸ್ತುತ್ಯರ್ಹ : ಉಪತಹಶೀಲ್ದಾರ್ ನರೇಂದ್ರನಾಥ್

ಬಂಟ್ವಾಳ, ಎಪ್ರಿಲ್ 20, 2026 (ಕರಾವಳಿ ಟೈಮ್ಸ್) : ಬಸವಣ್ಣನವರು ಸಾಮಾಜಿಕ ಕ್ರಾಂತಿಯ ಹರಿಕಾರರು. ಸಮಾನತೆಯ ಸಮಾಜದ ನಿರ್ಮಾಣಕ್ಕಾಗಿ ಇವರು ನಡೆಸಿದ ಹೋರಾಟ ಯಾವತ್ತೂ ಸ್ತುತ್ಯರ್ಹ ಎಂದು ಬಂಟ್ವಾಳ ತಾಲೂಕು ಕಚೇರಿಯ ಕೇಂದ್ರ ಸ್ಥಾನೀಯ ಉಪತಹಶೀಲ್ದಾರ್ ನರೇಂದ್ರ ನಾಥ್ ಮಿತ್ತೂರು ಹೇಳಿದರು. 

ಬಂಟ್ವಾಳ ತಾಲೂಕು ಮಟ್ಟದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಎಪ್ರಿಲ್ 20 ರಂದು ಬಿ ಸಿ ರೋಡಿನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ನಡೆದ ಬಸವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಸವಣ್ಣವರ ದೂರದೃಷ್ಟಿ ಸಮಾಜದ ಎಲ್ಲಾ ಸ್ತರದ ಜನತೆಗೆ ಸಮಾನ ಅವಕಾಶಗಳನ್ನು ಒದಗಿಸಲು ಶ್ರಮಿಸಿತು. ವಚನ ಸಾಹಿತ್ಯದ ಮೂಲಕ ಎಲ್ಲಾ ವರ್ಗದ ಜನರು ಮುನ್ನೆಲೆಗೆ ಬರಲು ಸಾಧ್ಯವಾಯಿತು ಎಂದರು. 

ತಾಲೂಕು ಚುನಾವಣಾ ಶಾಖೆಯ ಉಪತಹಶೀಲ್ದಾರ್ ನವೀನ್ ಕುಮಾರ್ ಬೆಂಜನಪದವು ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಶುಕುಮಾರ್, ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರು ಭಾಗವಹಿಸಿದ್ದರು. ತಾಲೂಕು ಆಡಳಿತ ಶಾಖೆಯ ವಿಷಯ ನಿರ್ವಾಹಕ ಸೀತಾರಾಮ ಕಮ್ಮಾಜೆ ಸ್ವಾಗತಿಸಿ, ವಂದಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಸಮ ಸಮಾಜ ನಿರ್ಮಾಣಕ್ಕೆ ಬಸವಣ್ಣ ನಡೆಸಿದ ಹೋರಾಟ ಸ್ತುತ್ಯರ್ಹ : ಉಪತಹಶೀಲ್ದಾರ್ ನರೇಂದ್ರನಾಥ್ Rating: 5 Reviewed By: karavali Times
Scroll to Top