ಬಂಟ್ವಾಳ, ಎಪ್ರಿಲ್ 02, 2026 (ಕರಾವಳಿ ಟೈಮ್ಸ್) : ಬಸ್ಸಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪಿಕಪ್ ವಾಹನ ಚಾಲಕ ಗಾಯಗೊಂಡ ಘಟನೆ ಮಾಣಿ ಗ್ರಾಮದ ಸೂರಿಕುಮೇರು ಎಂಬಲ್ಲಿ ಮಾ 31 ರಂದು ಸಂಭವಿಸಿದೆ.
ಗಾಯಗೊಂಡ ಪಿಕಪ್ ಚಾಲಕನನ್ನು ಬಸವರಾಜ್ ಎಂದು ಹೆಸರಿಸಲಾಗಿದೆ. ಪುತ್ತೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಬಸ್ಸಿಗೆ ಸೂರಿಕುಮೇರು ಎಂಬಲ್ಲಿ ಕೆಎ27 ಸಿ9412 ನೋಂದಣಿ ಸಂಖ್ಯೆಯ ಪಿಕಪ್ ವಾಹನ ಹಿಂದಿನಿಂದ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ತಕ್ಷಣ ಬಸ್ಸು ನಿಲ್ಲಿಸಿದ ಚಾಲಕ ನವ್ಯರಾಜ್ ಅವರು ಸ್ಥಳದಲ್ಲಿದ್ದ ಸಾರ್ವಜನಿಕರ ಸಹಕಾರದಿಂದ ಮಹೇಂದ್ರ ಪಿಕಪ್ ವಾಹನದೊಳಗೆ ಸಿಲುಕಿದ್ದ ಚಾಲಕನನ್ನು ಹೊರ ತೆಗೆದು ಕಲ್ಲಡ್ಕ ಪುಷ್ಪರಾಜ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment