ಕೈಕಂಬ : ಬೈಕ್ ಡಿಕ್ಕಿಯಾಗಿ ಹೆದ್ದಾರಿ ದಾಟುತ್ತಿದ್ದ ವ್ಯಕ್ತಿ ಆಸ್ಪತ್ರೆಗೆ - Karavali Times ಕೈಕಂಬ : ಬೈಕ್ ಡಿಕ್ಕಿಯಾಗಿ ಹೆದ್ದಾರಿ ದಾಟುತ್ತಿದ್ದ ವ್ಯಕ್ತಿ ಆಸ್ಪತ್ರೆಗೆ - Karavali Times

728x90

2 April 2026

ಕೈಕಂಬ : ಬೈಕ್ ಡಿಕ್ಕಿಯಾಗಿ ಹೆದ್ದಾರಿ ದಾಟುತ್ತಿದ್ದ ವ್ಯಕ್ತಿ ಆಸ್ಪತ್ರೆಗೆ

ಬಂಟ್ವಾಳ, ಎಪ್ರಿಲ್ 02, 2026 (ಕರಾವಳಿ ಟೈಮ್ಸ್) : ಬೈಕ್ ಡಿಕ್ಕಿಯಾಗಿ ಹೆದ್ದಾರಿ ದಾಟುತ್ತಿದ್ದ ವ್ಯಕ್ತಿ ಗಾಯಗೊಂಡ ಘಟನೆ ಬಿ ಸಿ ರೋಡು ಸಮೀಪದ ಕೈಕಂಬ ಎಂಬಲ್ಲಿ ಮಾ 31 ರಂದು ಸಂಜೆ ವೇಳೆ ಸಂಭವಿಸಿದೆ. 

ಗಾಯಗೊಂಡ ಪಾದಚಾರಿ ವ್ಯಕ್ತಿಯನ್ನು ಗದಗ ಜಿಲ್ಲೆಯ ಶಿರೂರ್ ನಿವಾಸಿ ಪ್ರಕಾಶ್ ಹೊನ್ನಪ್ಪ ಮೀಸಿ (47) ಎಂದು ಹೆಸರಿಸಲಾಗಿದೆ. ಇವರು ಮಾ 31 ರಂದು ಸಂಜೆ ಸುಮಾರು 6.45ರ ವೇಳೆಗೆ ಕೈಕಂಬದಲ್ಲಿರುವ ಪೆÇಳಲಿ ದ್ವಾರದ ಬಳಿ ಇರುವ ಅಂಗಡಿಯಿಂದ ಅಗತ್ಯ ಸಾಮಾನುಗಳನ್ನು ಖರೀದಿಸಲು ಎಂ ಕೆ ಟವರ್ ಕಡೆಯಿಂದ ಪೆÇಳಲಿ ದ್ವಾರದ ಕಡೆಗೆ  ಹೆದ್ದಾರಿ ದಾಟುತ್ತಿದ್ದ ಸಂದರ್ಭ ಅಬ್ದುಲ್ ಜಾಬೀರ್ ಎಂಬವರು ಚಲಾಯಿಸಿಕೊಂಡು ಬಂದ ಬೈಕ್ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. 

ಅಪಘಾತದಿಂದ ರಸ್ತೆಗೆ ಎಸೆಯಲ್ಪಟ್ಟ ಹೊನ್ನಪ್ಪ ಅವರಿಗೆ ಗಾಯಗಳಾಗಿದ್ದು, ತಕ್ಷಣ ಅವರನ್ನು ತುಂಬೆ ಪಾದರ್ ಮುಲ್ಲರ್ ಅಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಂಕನಾಡಿ ಪಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕೈಕಂಬ : ಬೈಕ್ ಡಿಕ್ಕಿಯಾಗಿ ಹೆದ್ದಾರಿ ದಾಟುತ್ತಿದ್ದ ವ್ಯಕ್ತಿ ಆಸ್ಪತ್ರೆಗೆ Rating: 5 Reviewed By: karavali Times
Scroll to Top