ಅಮ್ಟಾಡಿ : ಜಮೀನಿಗೆ ಅಕ್ರಮ ಪ್ರವೇಶಗೈದು ಮಾಲಕ ಹಾಗೂ ಮನೆ ಮಂದಿಗೆ ಜೀವಬೆದರಿಕೆ - Karavali Times ಅಮ್ಟಾಡಿ : ಜಮೀನಿಗೆ ಅಕ್ರಮ ಪ್ರವೇಶಗೈದು ಮಾಲಕ ಹಾಗೂ ಮನೆ ಮಂದಿಗೆ ಜೀವಬೆದರಿಕೆ - Karavali Times

728x90

8 April 2026

ಅಮ್ಟಾಡಿ : ಜಮೀನಿಗೆ ಅಕ್ರಮ ಪ್ರವೇಶಗೈದು ಮಾಲಕ ಹಾಗೂ ಮನೆ ಮಂದಿಗೆ ಜೀವಬೆದರಿಕೆ

ಬಂಟ್ವಾಳ, ಎಪ್ರಿಲ್ 08, 2026 (ಕರಾವಳಿ ಟೈಮ್ಸ್) : ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಪೈಪ್ ಲೈನ್ ಒಡೆದು ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಜಮೀನು ಮಾಲಕಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಒಡ್ಡಿದ ಘಟನೆ ಅಮ್ಟಾಡಿ ಗ್ರಾಮದ ಮಹಲ್ ತೋಟ ಎಂಬಲ್ಲಿ ಎಪ್ರಿಲ್ 5 ರಂದು ನಡೆದಿದ್ದು, ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇಲ್ಲಿನ ನಿವಾಸಿ ಸುನಿಲ್ ರೋಡ್ರಿಗಸ್ (48) ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಇವರ ಮನೆಯ ಹತ್ತಿರದ ಅಶೋಕ್ ಕಿರಣ್ ಡಿ ಸೋಜಾ ಎಂಬವರು ಮೊದಲಿನಿಂದಲೂ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಪೈಪ್ ಒಡೆದು ಹಾಕಿ ಕೃಷಿ ಭೂಮಿಯನ್ನು ಹಾಳು ಮಾಡುವ ಕೃತ್ಯ ಎಸಗುತ್ತಿರುವುದಲ್ಲದೆ ಸುನಿಲ್ ಹಾಗೂ ಅವರ ಮನೆ ಮಂದಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕುತ್ತಿರುವುದಾಗಿದೆ. 

ಎಪ್ರಿಲ್ 5 ರಂದು ರಾತ್ರಿ 8.30 ರ ವೇಳೆಗೆ ಅಶೋಕ್ ಕಿರಣ್ ಡಿ ಸೋಜಾ ಅವರು ಸುನಿಲ್ ರೋಡ್ರಿಗಸ್ ಅವರ ವರ್ಗ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಪೈಪ್ ಲೈನ್ ಒಡೆದು ಹಾಕಿದ್ದಾರೆ. ಇದನ್ನು ಸುನಿಲ್ ಅವರು ಪ್ರಶ್ನಿಸಿದ್ದಕ್ಕೆ ‘ಬೇವಾರ್ಸಿ ರಂಡೇ ಮಗ” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿರುತ್ತಾರೆ. ಹಾಗೂ ಪೈಪ್ ಲೈನ್ ಒಡೆದು ಹಾಕಿದ್ದರಿಂದ 2 ಸಾವಿರ ರೂಪಾಯಿ ನಷ್ಟ ಉಂಟಾಗಿದೆ ಎಂದು ನೀಡಿರುವ ದೂರಿನಂತೆ ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಅಮ್ಟಾಡಿ : ಜಮೀನಿಗೆ ಅಕ್ರಮ ಪ್ರವೇಶಗೈದು ಮಾಲಕ ಹಾಗೂ ಮನೆ ಮಂದಿಗೆ ಜೀವಬೆದರಿಕೆ Rating: 5 Reviewed By: karavali Times
Scroll to Top