ಬಂಟ್ವಾಳ, ಎಪ್ರಿಲ್ 08, 2026 (ಕರಾವಳಿ ಟೈಮ್ಸ್) : ಹೆದ್ದಾರಿಯಲ್ಲಿ ಕಾರನ್ನು ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣ ವಾಟ್ಸಪ್ ಮೂಲಕ ಬಂದಿರುವುದನ್ನು ಪತ್ತೆ ಹಚ್ಚಿದ ಬಂಟ್ವಾಳ ಸಂಚಾರಿ ಪೊಲೀಸರು ಕಾರು ಚಾಲಕನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣಾ ಸಿಬ್ಬಂದಿ ರಂಗನಾಥ (33) ಅವರು ದೂರು ನೀಡಿದ್ದು, ಇವರು ಎಪ್ರಿಲ್ 7 ರಂದು ಸಾಮಾಜಿಕ ಜಾಲತಾಣವಾದ ವಾಟ್ಸಪ್ ನಲ್ಲಿ ಬಂದ ವಿಡಿಯೋದಲ್ಲಿ ಕಪ್ಪು ಬಣ್ಣದ ಕೆ ಎಲ್ 09 ಆರ್6971 ನೋಂದಣಿ ಸಂಖ್ಯೆಯ ಕಾರೊಂದನ್ನು ಅದರ ಚಾಲಕ ಸರ್ಫುದ್ದೀನ್ ಎಂಬವರು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎಡ ಬದಿಯ ಚಕ್ರವನ್ನು ಹೆದ್ದಾರಿ ರಸ್ತೆಯ ಮೇಲೆ ಹಾಗೂ ಇನ್ನೊಂದು ಚಕ್ರವನ್ನು ಹೆದ್ದಾರಿಯ ಮಧ್ಯದಲ್ಲಿರುವ ಸಿಮೆಂಟ್ ಡಿವೈಡರ್ ಮೇಲೆ ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಮಾಡಿಕೊಂಡು ಚಲಾಯಿಸಿಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಠಾಣಾ ಪಿಎಸ್ಸೈ ಅವರಿಗೆ ಮಾಹಿತಿ ನೀಡಿ ಅವರ ಆದೇಶದಂತೆ ತಕ್ಷೀರು ಸ್ಥಳವನ್ನು ಖಚಿತ ಪಡಿಸಿಕೊಂಡು ಬಂಟ್ವಾಳ ಸಂಚಾರ ಠಾಣಾ ವ್ಯಾಪ್ತಿಯಾದ ಬಿ ಮೂಡ ಗ್ರಾಮದ ತಲಪಾಡಿ ಎಂಬಲ್ಲಿಗೆ ತೆರಳಿ ಸ್ಥಳೀಯರಲ್ಲಿ ವಿಡಿಯೋದಲ್ಲಿ ನಡೆದ ಘಟನೆ ಬಗ್ಗೆ ವಿಚಾರಿಸಿದ್ದಾರೆ.
2025 ರ ಮಾರ್ಚ್ 25 ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿರುವುದನ್ನು ನೋಡಿರುವುದಾಗಿ ಸ್ಥಳೀಯರು ತಿಳಿಸಿದ ಹಿನ್ನಲೆಯಲ್ಲಿ ಸದ್ರಿ ಕಾರು ಹಾಗೂ ಚಾಲಕನ ವಿರುದ್ದ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 40/2026 ಕಲಂ 281 ಬಿ ಎನ್ ಎಸ್ ಹಾಗೂ 184, 189, 177 ಐಎಂವಿ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ.


















0 comments:
Post a Comment