ಮೂಡಬಿದ್ರೆ, ಎಪ್ರಿಲ್ 19, 2026 (ಕರಾವಳಿ ಟೈಮ್ಸ್) : ವಿವಿಧ ಜಿಲ್ಲೆಗಳ ಠಾಣಾ ವ್ಯಾಪ್ತಿಗಳಲ್ಲಿ ಸುಮಾರು 17 ಪ್ರಕರಣಗಳಲ್ಲಿ ಭಾಗಿಯಾಗಿ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಮೂಡಬಿದ್ರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಮೂಲತಃ ಮೂಡಬಿದ್ರೆ ತಾಲೂಕು ತೆಂಕ ಮಿಜಾರು ಗ್ರಾಮದ ಆರ್ಗ ನಿವಾಸಿ ಪ್ರಸ್ತುತ ಬಂಟ್ವಾಳ ತಾಲೂಕು, ಬಿ ಸಿ ರೋಡು ಸಮೀಪದ ಪರ್ಲಿಯಾ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ದಿವಂಗತ ಅಬ್ದುಲ್ ಖಾದರ್ ಎಂಬವರ ಪುತ್ರ ಕೆ ಅಬ್ದುಲ್ ಬಶೀರ್ ಅಲಿಯಾಸ್ ಅರ್ಗ ಬಶೀರ್ (50) ಎಂದು ಹೆಸರಿಸಲಾಗಿದೆ.
ಆರೋಪಿ ದ.ಕ. ಜಿಲ್ಲೆ, ಚಿಕ್ಕಮಂಗಳೂರು ಜಿಲ್ಲೆಗಳಲ್ಲಿ ಸುಮಾರು 17 ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಸುಮಾರು 4 ವರ್ಷಗಳಿಂದ ತಲೆಮರಿಸಿಕೊಂಡಿದ್ದು, ಈತನ ವಿರುದ್ಧ ನ್ಯಾಯಾಲಯವು ದಸ್ತಗಿರಿ ವಾರೆಂಟ್, ಉದ್ಗೋಷಣ ವಾರೆಂಟ್ ಹೊರಡಿಸಿತ್ತು. ಈತ ನ್ಯಾಯಾಲಯಕ್ಕೆ ಹಾಜರಾಗದೇ ಮೂಡಬಿದ್ರೆ ತಾಲೂಕು ತೆಂಕ ಮಿಜಾರು ಗ್ರಾಮದ ಆರ್ಗ ಮನೆಯನ್ನು ತನ್ನ ಕುಟುಂಬದೊಂದಿಗೆ ಬಿಟ್ಟು, ಬಂಟ್ವಾಳ ತಾಲೂಕು ಬಿ ಸಿ ರೋಡ್ ಸಮೀಪದ ಪರ್ಲಿಯಾ ಎಂಬಲ್ಲಿ ಬಾಡಿಗೆ ಮನೆಯನ್ನು ಮಾಡಿ ವಾಸವಾಗಿದ್ದವನ್ನು ಖಚಿತ ಮಾಹಿತಿ ಮೇರೆಗೆ ಎಪ್ರಿಲ್ 18 ರಂದು 7.30ಕ್ಕೆ ಪರ್ಲಿಯ ಎಂಬಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಈತ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರಿಸಿಕೊಂಡ ಕಾರಣ ಈತನ ವಿರುದ್ಧ ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ದಸ್ತಗಿರಿ ಮಾಡಲಾಗಿದೆ.
ಈತನ ವಿರುದ್ದ ಮೂಡಬಿದ್ರೆ, ಬಜ್ಪೆ, ಮಂಗಳೂರು ಗ್ರಾಮಾಂತರ, ಧರ್ಮಸ್ಥಳ, ಬೆಳ್ತಂಗಡಿ, ಕಳಸ ಪೆÇಲೀಸ್ ಠಾಣೆಗಳಲ್ಲಿ ಸುಮಾರು 17 ಪ್ರಕರಣ ದಾಖಲಾಗಿದೆ. ಈತನನ್ನು ಮೇಲಾಧಿಕಾರಿಗಳ ನಿರ್ದೇಶನದಂತೆ ಮೂಡಬಿದ್ರೆ ಪೆÇಲೀಸರು ಬಂಧಿಸುವ ಕಾರ್ಯಾಚರಣೆ ನಡೆಸಿದ್ದಾರೆ.











0 comments:
Post a Comment