ಬಂಟ್ವಾಳ ನಗರ ಠಾಣಾ ಪೊಲೀಸರು ಬೇಧಿಸಿದ್ದ 2020 ಗಾಂಜಾ ಪ್ರಕರಣದ ಆರೋಪಿಗೆ 7 ವರ್ಷ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ - Karavali Times ಬಂಟ್ವಾಳ ನಗರ ಠಾಣಾ ಪೊಲೀಸರು ಬೇಧಿಸಿದ್ದ 2020 ಗಾಂಜಾ ಪ್ರಕರಣದ ಆರೋಪಿಗೆ 7 ವರ್ಷ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ - Karavali Times

728x90

4 April 2026

ಬಂಟ್ವಾಳ ನಗರ ಠಾಣಾ ಪೊಲೀಸರು ಬೇಧಿಸಿದ್ದ 2020 ಗಾಂಜಾ ಪ್ರಕರಣದ ಆರೋಪಿಗೆ 7 ವರ್ಷ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ

ಬಂಟ್ವಾಳ, ಎಪ್ರಿಲ್ 04, 2026 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೆಲ್ಕಾರ್ ಬಸ್ ನಿಲ್ದಾಣದ ಬಳಿ 2020 ರಲ್ಲಿ ಪೊಲೀಸರು ಬೇಧಿಸಿದ ಗಾಂಜಾ ಮಾರಾಟ ಪ್ರಕರಣದ ಆರೋಪಿಯನ್ನು ನ್ಯಾಯಾಲಯ ದೋಷಿ ಎಂದು ತೀರ್ಪಿತ್ತಿದ್ದು, 7 ವರ್ಷ ಸಜೆ ಹಾಗೂ 70 ಸಾವಿರ ರೂಪಾಯಿ ದಂದ ವಿಧಿಸಿ ಆದೇಶಿಸಿದೆ. 

ಶಿಕ್ಷೆಗೊಳಗಾದ ಆರೋಪಿಯನ್ನು ಮಂಗಳೂರು-ಬಂದರು ನಿವಾಸಿ ಟಿ ಪಿ ಫಾರೂಕ್ (50) ಎಂದು ಹೆಸರಿಸಲಾಗಿದೆ. 2020 ರ ನವೆಂಬರ್ 10 ರಂದು ಮೆಲ್ಕಾರ್ ಬಸ್ ನಿಲ್ಲಾಣದ ಬಳಿ ಆರೋಪಿ ಫಾರೂಕ್ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ, ಆಗಿನ ಬಂಟ್ವಾಳ ನಗರ ಠಾಣಾ ಪೆÇಲೀಸ್ ಇನ್ಸ್ ಪೆಕ್ಟರ್ ಚೆಲುವರಾಜ್ ಅವರು ದಾಳಿ ನಡೆಸಿ 49 ಸಾವಿರ ರೂಪಾಯಿ ಮೌಲ್ಯದ 1.480 ಕಿ ಗ್ರಾಂ ಗಾಂಜಾ ಹಾಗೂ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 126/2020 ರಂತೆ ಪ್ರಕರಣ ದಾಖಲಾಗಿತ್ತು. 

ಪ್ರಕರಣದ ತನಿಖೆ ನಡೆಸಿದ ಅಂದಿನ ಪೊಲೀಸ್ ಇನ್ಸ್ ಪೆಕ್ಟರ್ ಟಿ ಡಿ ನಾಗರಾಜ್ ಅವರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ್ ಅವರು ಶನಿವಾರ (ಎಪ್ರಿಲ್ 4) 7 ವರ್ಷ ಶಿಕ್ಷೆ ಮತ್ತು 70 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಶ್ರೀಮತಿ ಜೂಡಿತಾ ಅವರು ವಾದ ಮಂಡಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ನಗರ ಠಾಣಾ ಪೊಲೀಸರು ಬೇಧಿಸಿದ್ದ 2020 ಗಾಂಜಾ ಪ್ರಕರಣದ ಆರೋಪಿಗೆ 7 ವರ್ಷ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ Rating: 5 Reviewed By: karavali Times
Scroll to Top