ರಸ್ತೆಗೆ ಹಾನಿಯಾಗುವಂತೆ ಕೆಲಸ ಮಾಡಬೇಡಿ ಎಂದ ಮಹಿಳೆಗೆ ತಂಡದಿಂದ ಜಾತಿನಿಂದನೆ, ಹಲ್ಲೆ : ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ರಸ್ತೆಗೆ ಹಾನಿಯಾಗುವಂತೆ ಕೆಲಸ ಮಾಡಬೇಡಿ ಎಂದ ಮಹಿಳೆಗೆ ತಂಡದಿಂದ ಜಾತಿನಿಂದನೆ, ಹಲ್ಲೆ : ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

11 April 2026

ರಸ್ತೆಗೆ ಹಾನಿಯಾಗುವಂತೆ ಕೆಲಸ ಮಾಡಬೇಡಿ ಎಂದ ಮಹಿಳೆಗೆ ತಂಡದಿಂದ ಜಾತಿನಿಂದನೆ, ಹಲ್ಲೆ : ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕಡಬ, ಎಪ್ರಿಲ್ 11, 2026 (ಕರಾವಳಿ ಟೈಮ್ಸ್) : ಜೆಸಿಬಿ ಮೂಲಕ ಕೆಲಸ ಮಾಡುತ್ತಿದ್ದವರೊಂದಿಗೆ ರಸ್ತೆಗೆ ಹಾನಿಯಾಗುವುದಾಗಿ ತಿಳಿಸಿದ ಮಹಿಳೆಗೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ ಘಟನೆ ಕಡಬ ಕುಟ್ರುಪ್ಪಾಡಿ ಎಂಬಲ್ಲಿ ಎಪ್ರಿಲ್ 8 ರಂದು ನಡೆದಿದ್ದು, ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹಲ್ಲೆಗೊಳಗಾದ ಮಹಿಳೆಯನ್ನು ಇಲ್ಲಿನ ನಿವಾಸಿ ಮೋನಮ್ಮ (55) ಎಂದು ಹೆಸರಿಸಲಾಗಿದೆ. ಆರೋಪಿಗಳನ್ನು ರುಕ್ಮಯ್ಯ, ನೋಣಯ್ಯ, ಬಾಲಕೃಷ್ಣ ಹಾಗೂ ಹರಿಪ್ರಸಾದ್ ಎಂದು ಹೆಸರಿಸಲಾಗಿದೆ. 

ಮೋನಮ್ಮ ಅವರು ಪರಿಶಿಷ್ಟ ಜಾತಿ/ ಪಂಗಡಕ್ಕೆ ಸೇರಿದವರಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿರುವುದಾಗಿದೆ. ಎಪ್ರಿಲ್ 8 ರಂದು ತಾನು ಕೆಲಸ ಮಾಡಿಕೊಂಡಿದ್ದ ಮಾಲಿಕರ ಮನೆಯಲ್ಲಿದ್ದಾಗ, ಸದ್ರಿ ಮನೆಗೆ ಬರುವ ರಸ್ತೆಯಲ್ಲಿ ಜೆಸಿಬಿ ಮೂಲಕ ಕೆಲಸ ನಡೆಯುತ್ತಿದ್ದು, ಇದರಿಂದಾಗಿ ರಸ್ತೆಗೆ ಹಾನಿಯಾಗುತ್ತಿರುವುದನ್ನು ಕಂಡು ಮೋನಮ್ಮ ಅವರು ಕೆಲಸವಾಗುತ್ತಿದ್ದ ಸ್ಥಳಕ್ಕೆ ತೆರಳಿ ಆರೋಪಿಗಳಲ್ಲಿ ರಸ್ತೆಗೆ ಹಾನಿಯಾಗುತ್ತಿದ್ದು, ಜಾಗದ ಮಾಲಿಕರ ಉಪಸ್ಥಿತಿಯಲ್ಲಿ ಕೆಲಸ ನಡೆಸುವಂತೆ ತಿಳಿಸಿರುತ್ತಾರೆ. ಈ ವೇಳೆ ಅರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ರಸ್ತೆಗೆ ಹಾನಿಯಾಗುವಂತೆ ಕೆಲಸ ಮಾಡಬೇಡಿ ಎಂದ ಮಹಿಳೆಗೆ ತಂಡದಿಂದ ಜಾತಿನಿಂದನೆ, ಹಲ್ಲೆ : ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top