ಕಡಬ, ಎಪ್ರಿಲ್ 10, 2026 (ಕರಾವಳಿ ಟೈಮ್ಸ್) : ಸಂಸ್ಥೆಯೊಂದರ ಉತ್ಪನ್ನಗಳನ್ನು ಮಾರಾಟ ಮಾಡಲು ಬಂದಿದ್ದ ಸೇಲ್ಸ್ ಯುವತಿ ಜೊತೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯ ವಿರುದ್ದ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ನಿವಾಸಿ ಸಂತ್ರಸ್ಥ ಯುವತಿಯು ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದು, ಸಂಸ್ಥೆಯ ಉತ್ಪನ್ನಗಳನ್ನು ಮಾರಾಟ ಮಾಡುವ ಸಲುವಾಗಿ ಎಪ್ರಿಲ್ 8 ರಂದು ಮಧ್ಯಾಹ್ನ, ತನ್ನ ಸಹದ್ಯೋಗಿಗಳಾದ ಇಬ್ಬರು ಯುವತಿಯರೊಂದಿಗೆ ಕಡಬ ಬಲ್ಯ ದೇರಾಜೆ ಎಂಬಲ್ಲಿಗೆ ತೆರಳಿರುತ್ತಾರೆ. ಅಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾಗ ಸ್ಥಳೀಯ ನಿವಾಸಿಯಾದ ವ್ಯಕ್ತಿ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿರುತ್ತಾನೆ. ಈ ಬಗ್ಗೆ ವಿಚಾರಿಸಲು ಸಹೋದ್ಯೋಗಿಗಳು ಬಂದಾಗ, ಆರೋಪಿಯು ಸಂತ್ರಸ್ತ ಯುವತಿ ಹಾಗೂ ಅವರ ಸಹೋದ್ಯೋಗಿ ಯುವತಿಯರಿಗೆ ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿ ಅಸಭ್ಯವಾಗಿ ವರ್ತಿಸಿರುತ್ತಾನೆ. ಈ ಬಗ್ಗೆ ಕಡಬ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


















0 comments:
Post a Comment