ಮಂಗಳೂರು, ಎಪ್ರಿಲ್ 10, 2026 (ಕರಾವಳಿ ಟೈಮ್ಸ್) : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಎಪ್ರಿಲ್ 10 ರಿಂದ (ಇಂದಿನಿಂದ) ಮುಂದಿನ ಎರಡು ದಿನಗಳ ಕಾಲ ಅತ್ಯಧಿಕ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಕರಾವಳಿಯಲ್ಲಿ ಎಪ್ರಿಲ್ 10 ರಿಂದ 12ರವರೆಗೆ ಬಿಸಿಗಾಳಿ ಬೀಸುವ ಸೂಚನೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಕರಾವಳಿ ಭಾಗದ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಅರಬ್ಬಿ ಸಮುದ್ರ ಪ್ರಕ್ಷುಬ್ದವಾಗಿದ್ದು, ಗಂಟೆಗೆ 30 ರಿಂದ 40 ಕಿ ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಇದಲ್ಲದೇ ಅಧಿಕ ಗಾಳಿ ಒತ್ತಡದಿಂದಾಗಿ ಕಾರವಾರ ಸೇರಿದಂತೆ ಕರಾವಳಿ ಮೀನುಗಾರರು ಮೀನುಗಾರಿಕೆ ಬಂದ್ ಮಾಡಿದ್ದಾರೆ. ಆಳ ಸಮುದ್ರಕ್ಕೆ ತೆರಳುವ ಪರ್ಶಿಯನ್ ಬೋಟುಗಳು ಬಂದರಿನಲ್ಲಿ ಲಂಗುರು ಹಾಕಿದೆ.


















0 comments:
Post a Comment