ರಾಜಕೀಯ-ಪತ್ರಿಕೋದ್ಯಮ ಸಮಾಜದ ಎರಡು ಕಣ್ಣುಗಳಿದ್ದಂತೆ, ಎರಡೂ ಉತ್ತಮವಾದಾಗ ಸಮಾಜ ಸಂಪನ್ನ : ಸ್ಪೀಕರ್ ಡಾ ಖಾದರ್ ಅಭಿಮತ - Karavali Times ರಾಜಕೀಯ-ಪತ್ರಿಕೋದ್ಯಮ ಸಮಾಜದ ಎರಡು ಕಣ್ಣುಗಳಿದ್ದಂತೆ, ಎರಡೂ ಉತ್ತಮವಾದಾಗ ಸಮಾಜ ಸಂಪನ್ನ : ಸ್ಪೀಕರ್ ಡಾ ಖಾದರ್ ಅಭಿಮತ - Karavali Times

728x90

12 April 2026

ರಾಜಕೀಯ-ಪತ್ರಿಕೋದ್ಯಮ ಸಮಾಜದ ಎರಡು ಕಣ್ಣುಗಳಿದ್ದಂತೆ, ಎರಡೂ ಉತ್ತಮವಾದಾಗ ಸಮಾಜ ಸಂಪನ್ನ : ಸ್ಪೀಕರ್ ಡಾ ಖಾದರ್ ಅಭಿಮತ

ಬೀದರಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 40ನೇ ರಾಜ್ಯ ಸಮ್ಮೇಳನ 


ಬೀದರ್, ಎಪ್ರಿಲ್ 12, 2026 (ಕರಾವಳಿ ಟೈಮ್ಸ್) : ಪತ್ರಿಕೋದ್ಯಮವು ಸಾಮಾಜಿಕ ಜವಾಬ್ದಾರಿಯ ಪ್ರತೀಕವಾಗಿದೆ ಎಂದು ರಾಜ್ಯ ವಿಧಾನಸಭಾ ಸ್ಪೀಕರ್ ಡಾ ಯು ಟಿ ಖಾದರ್ ಹೇಳಿದರು.

ಬೀದರ ಜಿಲ್ಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೀದರ ಜಿಲ್ಲಾ ಘಟಕದಿಂದ ನಗರದ ಝೀರಾ ಕನ್ವೆನ್ಶನ್ ಹಾಲಿನಲ್ಲಿ ಎಪ್ರಿಲ್ 12 ರಂದು ನಡೆದ  40ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸಮಾಜ, ದೇಶ ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸುವ ಪತ್ರಕರ್ತರ ಪೆನ್ನು ಸದಾಕಾಲ ಸತ್ಯದ ಪರವಾಗಿರಬೇಕು ಎಂದು ಸಲಹೆಯಿತ್ತರು. 

ನಮ್ಮ ದೇಶದ ಪ್ರಬಲ ಶಕ್ತಿಯಾದ ಪತ್ರಿಕೋದ್ಯಮ, ಪತ್ರಕರ್ತರು, ಈ ದೇಶದ ಎಲ್ಲ ಜನರು ಒಂದೇ ಎಂದು ಹೇಳುವ ಅವಶ್ಯಕತೆಯಿದೆ. ಪ್ರತಿಯೊಬ್ಬರಿಗೂ ಪ್ರೇರಣಾದಾಯಕವಾದ ಬರವಣಿಗೆಯ ಶಕ್ತಿಯನ್ನು ಪತ್ರಕರ್ತರು ಹೊಂದಬೇಕು ಎಂದ ಅವರು ರಾಜಕೀಯ ಮತ್ತು ಪತ್ರಿಕೋದ್ಯಮ ಸಮಾಜದ ಎರಡು ಕಣ್ಣುಗಳಿದ್ದಂತೆ. ಎರಡೂ ಉತ್ತಮವಾದಾಗ ಸಮಾಜವು ಸಂಪನ್ನವಾಗಿರಲು ಸಾಧ್ಯವಿದೆ ಎಂದರು. 

ಪತ್ರಿಕೆಗಳು ಬರೀ ಟೀಕೆ, ಹೊಗಳಿಕೆಗೆ ಮಾತ್ರ ಸೀಮಿತವಾಗಬಾರದು. ಉತ್ತಮವಾಗಿ ಕೆಲಸ ಮಾಡುವರಿಗೆ ಪ್ರೇರಣೆಯಾಗುವ ಕಾರ್ಯ ಮಾಡಬೇಕು. ಮತ್ತು ಯಾವಾಗಲು ಪ್ರಾಮಾಣಿಕ ಸತ್ಯವನ್ನು ಪ್ರತಿಪಾದಿಸಬೇಕು ಎಂದ ಸ್ಪೀಕರ್ ಡಾ ಖಾದರ್ ಕಣ್ಣು, ಕಿವಿ ತೆರೆದು ಸಮಾಜವನ್ನು ತಲ ಸ್ಪರ್ಶಿಯಾಗಿ ನೋಡಿದಾಗಲೇ ಉತ್ತಮ ಪತ್ರಕರ್ತನಾಗಲು ಸಾಧ್ಯವಿದೆ ಎಂದರು. 

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ  ಮಾತನಾಡಿ, ಬೀದರ ಜಿಲ್ಲೆಯು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನ ನಡೆದಿರುವುದು ಸಂತಷ ತಂದಿದೆ. ತನಿಖಾ ಮಾಧ್ಯಮವು ಈಗ ಮರೆಯಾಗುತ್ತಿದೆ. ಈ ಬಗ್ಗೆ ಪತ್ರಕರ್ತರು ಅವಲೋಕನ ಮಾಡಬೇಕು ಎಂದರು.

ಪತ್ರಕರ್ತರಿಗೆ ಸಂರಕ್ಷಣೆ ಕೊಡುವ ವಿಷಯದಲ್ಲಿ ಸರ್ಕಾರ ಬದ್ದವಾಗಿದೆ ಎಂದ ಸಚಿವರು, ಪತ್ರಕರ್ತರು ಮಾಧ್ಯಮದ ಪಾವಿತ್ರ್ಯತೆ ಕಾಪಾಡಬೇಕು. ಈ ಮೂಲಕ ರಾಷ್ಟ್ರದ ಅಭಿವೃದ್ದಿಗೆ ಉತ್ತಮ ಕೊಡುಗೆ ನೀಡಬೇಕು ಎಂದರು. 

ವಿರೋಧ ಪಕ್ಷದ ನಾಯಕ ಆರ್ ಅಶೋಕ ಮಾತನಾಡಿ, ಪತ್ರಿಕೋದ್ಯಮವು ಈಗ ಹೊಸ ತಿರುವು ಪಡೆದಿದೆ. ಮಾಧ್ಯಮವನ್ನು ಕಪಿಮುಷ್ಟಿಯಲ್ಲಿಡಬಾರದು. ವಿರೋಧ ಪಕ್ಷದ ಕಾರ್ಯವನ್ನು ಪತ್ರಿಕೋದ್ಯಮ ಮಾಡಬೇಕು.  ಎದೆಗಾರಿಕೆಯಿಂದ, ಧೈರ್ಯದಿಂದ ವೃತ್ತಿ ಮಾಡಿದಾಗ ಪತ್ರಿಕಾ ವೃತ್ತಿಯ ಘನತೆ ಹೆಚ್ಚಲಿದೆ ಎಂದರು.

ಪ್ರಮುಖರಾದ ಬಂಡೆಪ್ಪ ಖಾಶೆಂಪೂರ ಮಾತನಾಡಿ, ಪತ್ರಿಕಾ ವೃತ್ತಿ ಈಗ ಕಷ್ಟಕರವಾಗಿದೆ. ಹಾಗಾಗಿ ಸರ್ಕಾರ ಪತ್ರಕರ್ತರಿಗೆ ಸ್ಪಂದನೆ ನೀಡಬೇಕು. ಪತ್ರಕರ್ತರ ಸಂಘ ಕಟ್ಟಿದ ಡಿವಿಜಿ ಅವರ ಶ್ರಮವನ್ನು ಸ್ಮರಿಸಬೇಕು ಎಂದು ಸಲಹೆ ನೀಡಿದರು. 

ಸಮಾರಂಭದಲ್ಲಿ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಡಾ. ಸಿದ್ದು ಪಾಟೀಲ, ಮಾರುತಿ ರಾವ್ ಮೂಳೆ, 

ರಾಜ್ಯ ಮಾಹಿತಿ ಆಯುಕ್ತ ಬಿ ವೆಂಕಟ ಸಿಂಗ್, ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ ಸಿ ಲೋಕೇಶ, ಮುಖಂಡರಾದ ರಮೇಶ ಪಾಟೀಲ, ಶಕುಂತಲಾ ಬೆಲ್ದಾಳೆ ಮೊದಲಾದವರು ಭಾಗವಹಿಸಿದ್ದರು. ಸಂಘದ ಜಿಲ್ಲಾಧ್ಯಕ್ಷ ಆನಂದ ದೇವಪ್ಪ ಸ್ವಾಗತಿಸಿದರು. ಬಳಿಕ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

  • Blogger Comments
  • Facebook Comments

0 comments:

Post a Comment

Item Reviewed: ರಾಜಕೀಯ-ಪತ್ರಿಕೋದ್ಯಮ ಸಮಾಜದ ಎರಡು ಕಣ್ಣುಗಳಿದ್ದಂತೆ, ಎರಡೂ ಉತ್ತಮವಾದಾಗ ಸಮಾಜ ಸಂಪನ್ನ : ಸ್ಪೀಕರ್ ಡಾ ಖಾದರ್ ಅಭಿಮತ Rating: 5 Reviewed By: karavali Times
Scroll to Top