ಮಿತ್ತೂರು : ಅಕ್ರಮ ಕೋಳಿ ಅಂಕಕ್ಕೆ ವಿಟ್ಲ ಪೊಲೀಸರ ದಾಳಿ, ನಾಲ್ವರು ವಶಕ್ಕೆ - Karavali Times ಮಿತ್ತೂರು : ಅಕ್ರಮ ಕೋಳಿ ಅಂಕಕ್ಕೆ ವಿಟ್ಲ ಪೊಲೀಸರ ದಾಳಿ, ನಾಲ್ವರು ವಶಕ್ಕೆ - Karavali Times

728x90

2 April 2026

ಮಿತ್ತೂರು : ಅಕ್ರಮ ಕೋಳಿ ಅಂಕಕ್ಕೆ ವಿಟ್ಲ ಪೊಲೀಸರ ದಾಳಿ, ನಾಲ್ವರು ವಶಕ್ಕೆ

ಬಂಟ್ವಾಳ, ಎಪ್ರಿಲ್ 02, 2026 (ಕರಾವಳಿ ಟೈಮ್ಸ್) : ಇಡ್ಕಿದು ಗ್ರಾಮದ ಮಿತ್ತೂರು-ಹೇಮಾಜೆ ರೈಲ್ವೆ ಬ್ರಿಡ್ಜ್ ಬಳಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕಕ್ಕೆ ದಾಳಿ ನಡೆಸಿದ ವಿಟ್ಲ ಪೊಲೀಸರು ನಾಲ್ವರನ್ನು ಬಂಧಿಸಿದ ಘಟನೆ ಎಪ್ರಿಲ್ 1 ರಂದು ಸಂಜೆ ನಡೆದಿದೆ. 

ಬಂಧಿತ ಆರೋಪಿಗಳನ್ನು ಜಯಾನಂದ, ಪ್ರಣೀತ್, ಪ್ರಶ್ಮಿತ್ ಹಾಗೂ ಯೋಗೀಶ್ ಎಂದು ಹೆಸರಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸ್ ಠಾಣಾ ಪಿಎಸ್ಸೈ ರತ್ನಕುಮಾರ್ ನೇತೃತ್ವದ ಪೊಲೀಸರು ಈ ದಾಳಿ ಸಂಘಟಿಸಿದ್ದಾರೆ. ಪೊಲೀಸ್ ದಾಳಿ ವೇಳೆ ಸ್ಥಳದಲ್ಲಿದ್ದ ಹಲವರು ತಪ್ಪಿಸಿಕೊಂಡಿದ್ದು, ನಾಲ್ವರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. 

ಆರೋಪಿಗಳಿಂದ ನಗದು ಹಣ, ಕೋಳಿ ಹಾಗೂ ಬಾಳುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಿತ್ತೂರು : ಅಕ್ರಮ ಕೋಳಿ ಅಂಕಕ್ಕೆ ವಿಟ್ಲ ಪೊಲೀಸರ ದಾಳಿ, ನಾಲ್ವರು ವಶಕ್ಕೆ Rating: 5 Reviewed By: karavali Times
Scroll to Top