ಬಂಟ್ವಾಳ, ಎಪ್ರಿಲ್ 02, 2026 (ಕರಾವಳಿ ಟೈಮ್ಸ್) : ತೆಂಗಿನ ಮರ ಕಡಿಯುತ್ತಿದ್ದ ವೇಳೆ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ನೆಟ್ಲಮುಡ್ನೂರು ಗ್ರಾಮದ ಮೀನಾವು ಎಂಬಲ್ಲಿ ಎಪ್ರಿಲ್ 1 ರಂದು ಬೆಳಿಗ್ಗೆ ಸಂಭವಿಸಿದೆ.
ಮೃತರನ್ನು ಪುತ್ತೂರು ತಾಲೂಕು, ಕುರಿಯ ಗ್ರಾಮದ ಅಮ್ಮುಂಜೆ ನಿವಾಸಿ ಶೀನಪ್ಪ ಗೌಡ ಎಂದು ಹೆಸರಿಸಲಾಗಿದೆ. ಇವರು ಎ 1 ರಂದು ಬೆಳಿಗ್ಗೆ ಬಂಟ್ವಾಳ ತಾಲೂಕು ನೆಟ್ಲ ಮುಡ್ನೂರು ಗ್ರಾಮದ ಮೀನಾವು ಎಂಬಲ್ಲಿ ಮೋಹನ ಗೌಡ ಎಂಬವರ ಜಾಗದಲ್ಲಿ ತೆಂಗಿನ ಮರವನ್ನು ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.
ತಕ್ಷಣ ಇವರನ್ನು ಜಮೀನು ಮಾಲಕ ಮೋಹನ ಗೌಡ, ಅವರ ಸಹೋದರರಾದ ರುಕ್ಮ ಗೌಡ ಮತ್ತು ನೊಂಡಪ್ಪ ಗೌಡ ಅವರು ಸೇರಿಕೊಂಡು ಪುತ್ತೂರು ಮಹಾವೀರ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಈ ಬಗ್ಗೆ ಮೃತರ ಪುತ್ರ ರಿತೇಶ್ (22) ಅವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.











0 comments:
Post a Comment