ಪಿಯುಸಿ ಫಲಿತಾಂಶ : ತುಂಬೆ ಪದವಿಪೂರ್ವ ಕಾಲೇಜಿಗೆ 94 ಶೇಕಡಾ ಫಲಿತಾಂಶ - Karavali Times ಪಿಯುಸಿ ಫಲಿತಾಂಶ : ತುಂಬೆ ಪದವಿಪೂರ್ವ ಕಾಲೇಜಿಗೆ 94 ಶೇಕಡಾ ಫಲಿತಾಂಶ - Karavali Times

728x90

9 April 2026

ಪಿಯುಸಿ ಫಲಿತಾಂಶ : ತುಂಬೆ ಪದವಿಪೂರ್ವ ಕಾಲೇಜಿಗೆ 94 ಶೇಕಡಾ ಫಲಿತಾಂಶ

Yashika
Amna
Safa
Liya
Shayan
Muskan

 ಬಂಟ್ವಾಳ, ಎಪ್ರಿಲ್ 09, 2026 (ಕರಾವಳಿ ಟೈಮ್ಸ್) : ಮಾರ್ಚ್ 2026 ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದ್ದು, ತುಂಬೆ ಪದವಿಪೂರ್ವ ಕಾಲೇಜು 94 ಶೇಕಡಾ ಫಲಿತಾಂಶ ದಾಖಲಿಸಿ ಉತ್ತಮ ಸಾಧನೆ ಮಾಡಿದೆ. 

ವಿಜ್ಞಾನ ವಿಭಾಗದಲ್ಲಿ 77 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 74 ವಿದ್ಯಾರ್ಥಿಗಳು ಉತ್ತೀರ್ಣರಾಗಿ 96 ಶೇ ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 68 ವಿದ್ಯಾರ್ಥಿಗಳಲ್ಲಿ 63 ಮಂದಿ ಉತ್ತೀರ್ಣರಾಗಿ 93 ಶೇ ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ 29 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 27 ಮಂದಿ ಉತ್ತೀರ್ಣರಾಗಿ 93 ಶೇ ಫಲಿತಾಂಶ ದಾಖಲಿಸಿದೆ. 

ವಿಜ್ಞಾನ ವಿಭಾಗದಲ್ಲಿ 28 ಡಿಸ್ಟಿಂಕ್ಷನ್, 35 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ, ಕು ಹಾಜಿರತ್ ಸಫಾ ಡಿ ಬಿ 583 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕಾಮರ್ಸ್ ವಿಭಾಗದಲ್ಲಿ ಹಾಜರಾದ ವಿದ್ಯಾರ್ಥಿಗಳಲ್ಲಿ 11 ಡಿಸ್ಟಿಂಕ್ಷನ್, 44 ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರೆ ಕು ಯಶಿಕಾ 572 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಹಾಜರಾದ ವಿದ್ಯಾರ್ಥಿಗಳಲ್ಲಿ 15 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕು ಆಶಿಯಾ ಅಮ್ನಾ 492 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿರುತ್ತಾರೆ ಎಂದು ಕಾಲೇಜು ಪ್ರಾಂಶುಪಾಲ ವಿ ಸು ಭಟ್ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪಿಯುಸಿ ಫಲಿತಾಂಶ : ತುಂಬೆ ಪದವಿಪೂರ್ವ ಕಾಲೇಜಿಗೆ 94 ಶೇಕಡಾ ಫಲಿತಾಂಶ Rating: 5 Reviewed By: karavali Times
Scroll to Top