ನನ್ನ ತಾಯಿ ಈಗ ಇದ್ದಿದ್ದೆ ತುಂಬಾ ಖುಷಿ ಪಡುತ್ತಿದ್ದರು : ತಾಯಿ ಅಗಲಿಗೆ ದುಃಖದ ನಡುವೆಯೂ ಪರೀಕ್ಷೆ ಬರೆದು ಮನದಾಳ ಬಿಚ್ಚಿಟ್ಟ ರಾಜ್ಯಕ್ಕೆ ಟಾಪರ್ ಆಗಿ ಮೂಡಿಬಂದ ಆಳ್ವಾಸ್ ವಿದ್ಯಾರ್ಥಿನಿ ದಿಶಾ - Karavali Times ನನ್ನ ತಾಯಿ ಈಗ ಇದ್ದಿದ್ದೆ ತುಂಬಾ ಖುಷಿ ಪಡುತ್ತಿದ್ದರು : ತಾಯಿ ಅಗಲಿಗೆ ದುಃಖದ ನಡುವೆಯೂ ಪರೀಕ್ಷೆ ಬರೆದು ಮನದಾಳ ಬಿಚ್ಚಿಟ್ಟ ರಾಜ್ಯಕ್ಕೆ ಟಾಪರ್ ಆಗಿ ಮೂಡಿಬಂದ ಆಳ್ವಾಸ್ ವಿದ್ಯಾರ್ಥಿನಿ ದಿಶಾ - Karavali Times

728x90

10 April 2026

ನನ್ನ ತಾಯಿ ಈಗ ಇದ್ದಿದ್ದೆ ತುಂಬಾ ಖುಷಿ ಪಡುತ್ತಿದ್ದರು : ತಾಯಿ ಅಗಲಿಗೆ ದುಃಖದ ನಡುವೆಯೂ ಪರೀಕ್ಷೆ ಬರೆದು ಮನದಾಳ ಬಿಚ್ಚಿಟ್ಟ ರಾಜ್ಯಕ್ಕೆ ಟಾಪರ್ ಆಗಿ ಮೂಡಿಬಂದ ಆಳ್ವಾಸ್ ವಿದ್ಯಾರ್ಥಿನಿ ದಿಶಾ

ಮಂಗಳೂರು, ಎಪ್ರಿಲ್ 10, 2026 (ಕರಾವಳಿ ಟೈಮ್ಸ್) : ಪರೀಕ್ಷೆ ನಡೆಯುವ ವೇಳೆ ತಾಯಿ ಮರಣ ಹೊಂದಿದ ದುಃಖದಲ್ಲೇ ಎಕ್ಸಾಂ ಬರೆದಿದ್ದ ವಿದ್ಯಾರ್ಥಿನಿ ಇದೀಗ ರಾಜ್ಯಮಟ್ಟದಲ್ಲಿ ಟಾಪರ್ ಆಗಿ ಮೂಡಿ ಬಂದಿರುವುದು ವಿದ್ಯಾರ್ಥಿನಿಯ ದುಃಖದಲ್ಲೂ ಸಂತೋಷಪಡುವಂತಾಗಿದೆ. 

ದ್ವಿತೀಯ ಪರೀಕ್ಷೆ ನಡೆಯುತ್ತಿರುವಾಗಲೇ ಅಮ್ಮನನ್ನು ಕಳೆದುಕೊಂಡರೂ ಧೃತಿಗೆಡದೆ ಸಾಧನೆಯನ್ನೇ ಗುರಿಯಾಗಿಸಿಕೊಂಡು ಅಭ್ಯಾಸ ಮಾಡಿದ್ದ ಮೂಡುಬಿದಿರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ ಪೂರ್ಣ 600 ಅಂಕ ಗಳಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮೂರು ಪರೀಕ್ಷೆಗಳು ಮುಗಿದು ಇನ್ನೂ ಮೂರು ಪರೀಕ್ಷೆಗಳು ಬಾಕಿಯಿದ್ದ ಸಂದರ್ಭ ತಾಯಿಯನ್ನು ಕಳೆದುಕೊಂಡು ಅದೇ ದುಃಖದಲ್ಲಿ ಪರೀಕ್ಷೆ ಬರೆದಿದ್ದಳು. ಇದೀಗ ಪರೀಕ್ಷಾ ಫಲಿತಾಂಶ ಗುರುವಾರ ಹೊರಬಿದ್ದಿದ್ದು, ರಾಜ್ಯದಲ್ಲೇ ಟಾಪರ್ ಆಗಿ ಮೂಡಿ ಬಂದಿದ್ದಾಳೆ. 

ಈ ಬಗ್ಗೆ ಪ್ರತಿಕ್ರಿಯಿಸಿದ ಟಾಪರ್ ವಿದ್ಯಾರ್ಥಿನಿ ದಿಶಾ, ಮೂರು ಪರೀಕ್ಷೆ ಬರೆದ ನಂತರ ತಾಯಿಯನ್ನು ಕಳೆದುಕೊಂಡೆ. ಆ ಸಂದರ್ಭದಲ್ಲಿ ಏನು ಮಾಡಬೇಕೆಂದು ತಿಳಿಯಲಿಲ್ಲ. ಯಾವ ಕಡೆ ಗಮನ ಕೊಡಬೇಕೆಂದು ಮೊದಲಿಗೆ ತೋಚಲಿಲ್ಲ. ಅದಾದ ನಂತರ ಒಂದನ್ನು ಕಳೆದುಕೊಂಡೆ. ಇನ್ನೊಂದನ್ನು ಕಳೆದುಕೊಳ್ಳುವುದು ಬೇಡವೆಂದು ಪರೀಕ್ಷೆಯೆಡೆಗೆ ಹೆಚ್ಚು ಗಮನ ಹರಿಸಿದೆ. ಆದರೆ ನನ್ನ ಅಧ್ಯಾಪಕರುಗಳು ನನ್ನ ಬೆನ್ನಿಗೆ ಬಲವಾಗಿ ನಿಂತರು. ಅಮ್ಮ ಬಿದ್ದು ತಲೆಗೆ ಪೆಟ್ಟಾಗಿತ್ತು. ಹೀಗಾಗಿ ಕಳೆದುಕೊಂಡೆ. ನನ್ನ ತಾಯಿ ಈಗ ಇದ್ದಿದ್ರೆ ತುಂಬಾ ಖುಷಿ ಪಡುತ್ತಿದ್ದರು. ಹೇಗೆ ಹೇಳಬೇಕೆಂದು ಅರ್ಥ ಆಗುತ್ತಿಲ್ಲ. ನಾನು ಇಲ್ಲದ ಅಮ್ಮನಿಗೋಸ್ಕರವಾದ್ರೂ ಪರೀಕ್ಷೆ ಬರೆದು ಸಾಧನೆ ಮಾಡಬೇಕು ಎಂದು ದೃಢ ನಿಶ್ಚಯ ಮಾಡಿದೆ. ಅದಕ್ಕೆ ತುಂಬಾ ಕಷ್ಟಪಟ್ಟು ಏನಾದ್ರೂ ಆಗಲಿ. ಬೇಕು ಅಂತ ನಿರ್ಧಾರ ಮಾಡಿದೆ. ನಾನು ಚೆನ್ನಾಗಿ ಓದಬೇಕು ಎಂಬುದೇ ಅಮ್ಮನ ಆಸೆಯಾಗಿತ್ತು. ಅಮ್ಮನನ್ನು ಮನದಲ್ಲಿ ತುಂಬಿಕೊಂಡು ಅಭ್ಯಾಸದಲ್ಲಿ ಲಕ್ಷ್ಯವನ್ನು ಕೇಂದ್ರೀಕರಿಸಿದೆ. ಪರಿಶ್ರಮಕ್ಕೆ ಫಲಿತಾಂಶ ದೊರೆತಿದೆ ಎಂದು ದಿಶಾ ಅಮ್ಮನನ್ನು ನೆನೆಪಿಸಿಕೊಂಡೇ ಸಾಧನೆಯ ದಾರಿಯನ್ನು ಬಿಚ್ಚಿಟ್ಟಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ನನ್ನ ತಾಯಿ ಈಗ ಇದ್ದಿದ್ದೆ ತುಂಬಾ ಖುಷಿ ಪಡುತ್ತಿದ್ದರು : ತಾಯಿ ಅಗಲಿಗೆ ದುಃಖದ ನಡುವೆಯೂ ಪರೀಕ್ಷೆ ಬರೆದು ಮನದಾಳ ಬಿಚ್ಚಿಟ್ಟ ರಾಜ್ಯಕ್ಕೆ ಟಾಪರ್ ಆಗಿ ಮೂಡಿಬಂದ ಆಳ್ವಾಸ್ ವಿದ್ಯಾರ್ಥಿನಿ ದಿಶಾ Rating: 5 Reviewed By: karavali Times
Scroll to Top