ಬಂಟ್ವಾಳ, ಎಪ್ರಿಲ್ 10, 2026 (ಕರಾವಳಿ ಟೈಮ್ಸ್) : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ (ಪಿಸಿಎಂಬಿ) ವಿಭಾಗದಲ್ಲಿ ಮೂಡಬಿದ್ರೆ ನ್ಯೂ ವೈಬ್ರಂಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ತಸ್ನೀಂ ಎಸ್ ಎಂ ಅವರು 592 ಅಂಕ ಗಳಿಸಿ, 98.66 ಶೇಕಡಾ ಫಲಿತಾಂಶದೊಂದಿಗೆ ರಾಜ್ಯ ಮಟ್ಟದಲ್ಲಿ 8ನೇ ರ್ಯಾಂಕ್ ಪಡೆದಿದ್ದಾರೆ.
ಸಣ್ಣ ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದು, ಪ್ರಸ್ತುತ ಬಿ ಸಿ ರೋಡು ಸಮೀಪದ ಕೈಕಂಬದಲ್ಲಿ ವಾಸವಾಗಿರುವ ಮುಹಮ್ಮದ್ ಕೆ ಪಿ ಮತ್ತು ಜೈಬುನ್ನೀಸಾ ಸಂಪಾಜೆ ದಂಪತಿಯ ಪುತ್ರಿಯಾಗಿರುವ ಈಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ 619 ಅಂಕ ಗಳಿಸಿದ ಸಾಧನೆ ಮಾಡಿದ್ದಳು.
ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದಲ್ಲಿ ಅತ್ಯಧಿಕ ಅಂಕಗಳಿಸಿದವರಲ್ಲಿ ತಸ್ನೀಂ ಎಸ್ ಎಂ ಪ್ರಥಮ ಸ್ಥಾನ ಪಡೆದಿದ್ದಾಳೆ. ಈಕೆ ಸುಳ್ಯ ತಾಲೂಕು ಸಂಪಾಜೆಯ ನಿವೃತ್ತ ಶಾಲಾ ಮುಖ್ಯೋಪಾಧ್ಯಾಯ ಕೆ ಇಬ್ರಾಹಿಂ ಮಾಸ್ಟರ್ ಅವರ ಮೊಮ್ಮಗಳಾಗಿದ್ದಾಳೆ.


















0 comments:
Post a Comment