ಬಂಟ್ವಾಳ, ಎಪ್ರಿಲ್ 24, 2026 (ಕರಾವಳಿ ಟೈಮ್ಸ್) : ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಗೆ 91.35 ಶೇಕಡಾ ಫಲಿತಾಂಶ ಬಂದಿದೆ.
603 ಅಂಕ ಪಡೆದ ಕು ಶ್ರಾವ್ಯ ಅವರು 96.48 ಫಲಿತಾಂಶದೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿ ಮೂಡಿ ಬಂದಿದ್ದಾಳೆ. ಈಕೆ ಸಜಿಪಮುನ್ನೂರು ಗ್ರಾಮದ ಕಂದೂರು-ಖಂಡಿಗ ನಿವಾಸಿ ಪದ್ಮನಾಭ ಹಾಗೂ ನಳಿನಿ ದಂಪತಿಯ ಪುತ್ರಿಯಾಗಿದ್ದಾಳೆ.
ಉಳಿದಂತೆ 576 ಅಂಕ ಪಡೆದ ಕು ನವ್ಯಾ ಅವರು 92.16 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ ಹಾಗೂ 562 ಅಂಕ ಪಡೆದ ಕು ತ್ರಿಶಾ ಅವರು 89.92 ಫಲಿತಾಂಶ ದಾಖಲಿಸಿ ತೃತೀಯ ಸ್ಥಾನ ಪಡೆದಿದ್ದಾಳೆ.
ಒಟ್ಟು 81 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 74 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 6 ಮಂದಿ ಡಿಸ್ಟಿಂಕ್ಷನ್ ಉತ್ತೀರ್ಣರಾಗಿದ್ದು, 44 ಮಂದಿ ಪ್ರಥಮ ದರ್ಜೆ, 13 ಮಂದಿ ದ್ವಿತೀಯ ದರ್ಜೆ ಹಾಗೂ 11 ಮಂದಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 16 ಮಂದಿ ವಿದ್ಯಾರ್ಥಿಗಳು ಸಂಸ್ಕøತ ವಿಷಯದಲ್ಲಿ 125 ಪೂರ್ಣಾಂಕಗಳನ್ನು ಪಡೆದಿದ್ದಾರೆ ಎಂದು ಶಾಲಾ ಅಧ್ಯಾಪಕ ಧನರಾಜ್ ಡಿ ಆರ್ ಅವರು ತಿಳಿಸಿದ್ದಾರೆ.













0 comments:
Post a Comment