ಸುಳ್ಯ, ಎಪ್ರಿಲ್ 10, 2026 (ಕರಾವಳಿ ಟೈಮ್ಸ್) : ಸಾಲದ ಮೊತ್ತ ಹಿಂತಿರುಗಿಸಲು ಮನೆಗೆ ಬಂದಾಕೆ ಮತ್ತೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವುಗೈದ ಪ್ರಕರಣ ಬೇಧಿಸಿರುವ ಸುಳ್ಯ ಪೊಲೀಸರು ಚಿನ್ನಾಭರಣ ಸಹಿತ ಇಬ್ಬರನ್ನು ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಶೃತಿ ಅಲಿಯಾಸ್ ವಿಶ್ಮೀತ (37) ಹಾಗೂ ಕೃತ್ಯಕ್ಕೆ ಸಹಕರಿಸಿದ ಪ್ರದೀಪ್ ಎಂದು ಹೆಸರಿಸಲಾಗಿದೆ.
ಸುಳ್ಯ ಕಸಬಾ ನಿವಾಸಿ ಪುಣ್ಯಶ್ರೀ (20) ಅವರ ತಂದೆಗೆ ಆರೋಪಿತೆ ಶೃತಿ ಅಲಿಯಾಸ್ ವಿಶ್ಮೀತ(37) ಎಂಬಾಕೆಯೊಂದಿಗೆ ಸಂಪರ್ಕವಿದ್ದು ಆಕೆಗೆ ತಂದೆ ಸಾಲವಾಗಿ 6 ಲಕ್ಷ ರೂಪಾಯಿ ಹಣವನ್ನು ನೀಡಿರುವುದಾಗಿದೆ. ಪುಣ್ಯಶ್ರೀ ಅವರು ಸದ್ರಿ ಹಣವನ್ನು ಹಿಂತಿರುಗಿಸುವಂತೆ ಆರೋಪಿತೆಗೆ ತಿಳಿಸಿದ ಮೇರೆಗೆ ಆಕೆಯು ಹಣವನ್ನು ಹಿಂತಿರುಗಿಸುವುದಾಗಿ ಒಪ್ಪಿಕೊಂಡು ಎಪ್ರಿಲ್ 7 ರಂದು ಮನೆಗೆ ಬಂದಿರುತ್ತಾರೆ. ಆ ಬಳಿಕ ದೂರುದಾರರು ಕೆಲಸಕ್ಕೆ ತೆರಳಿದ್ದು, ರಾತ್ರಿ ಮನೆಯ ಕಪಾಟಿನ ಬೀಗದ ಕೀ ಬಿದ್ದಿರುವುದನ್ನು ಕಂಡು ಕಪಾಟನ್ನು ಪರಿಶೀಲಿಸಿದಾಗ ಮನೆಯಲ್ಲಿದ್ದ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ 62ಳಿ ಗ್ರಾಮ್ ತೂಕದ ಚಿನ್ನಾಭರಣಗಳು ಕಳವಾಗಿರುವುದು ಬೆಳಕಿಗೆ ಬಂದಿದೆ.
ಕಳವು ಕೃತ್ಯವನ್ನು ಮನೆಗೆ ಬಂದಿದ್ದ ಆರೋಪಿತೆ ಶೃತಿ ಅಲಿಯಾಸ್ ವಿಶ್ಮೀತ ಎಂಬಾಕೆ ನಡೆಸಿರುವುದಾಗಿ ದೂರು ನೀಡಿದ ಮೇರೆಗೆ ಸುಳ್ಯ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿತೆ ಶೃತಿ ಅಲಿಯಾಸ್ ವಿಶ್ಮೀತ ಎಂಬಾಕೆಯನ್ನು ಹಾಗೂ ಕೃತ್ಯಕ್ಕೆ ಸಹಕರಿಸಿದ ಪ್ರದೀಪ್ ಎಂಬಾತನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದು, ಕಳವಾಗಿರುವ ಚಿನ್ನಾಭರಣಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.


















0 comments:
Post a Comment