ಬಂಟ್ವಾಳ, ಎಪ್ರಿಲ್ 07, 2026 (ಕರಾವಳಿ ಟೈಮ್ಸ್) : ಅಟೋ ರಿಕ್ಷಾದಲ್ಲಿ ಅಕ್ರಮ ಮದ್ಯ ಸಾಗಾಟ ಪ್ರಕರಣ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಮದ್ಯ ಸಹಿತ ಅಟೋ ರಿಕ್ಷಾ ವಶಕ್ಕೆ ಪಡೆದುಕೊಂಡ ಘಟನೆ ಸಜಿಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಎಪ್ರಿಲ್ 6 ರಂದು ಸಂಜೆ ನಡೆದಿದೆ.
ಮದ್ಯ ಸಾಗಾಟ ನಡೆಸುತ್ತಿದ್ದ ಆರೋಪಿಯನ್ನು ಪಾಣೆಮಂಗಳೂರು ನಿವಾಸಿ ಬಾಲಕೃಷ್ಣ ಎಂದು ಗುರುತಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಸೈ ರನ್ನ ಗೌಡ ನೇತೃತ್ವದಲ್ಲಿ ಸಿಬ್ಬಂದಿಗಳಾದ ಗಂಗಾಧರ್, ಶೇಖರ ಗೌಡ, ಹಾಲೇಶ, ಬಸವರಾಜ ಹಾಗೂ ಸುಜಾತ ಅವರ ತಂಡ ಈ ಕಾರ್ಯಾಚರಣೆ ನಡೆಸಿದೆ.
ಕಾರ್ಯಾಚರಣೆ ವೇಳೆ ಅಟೋ ರಿಕ್ಷಾ ಚಾಲಕ ಓಡಿ ಪರಾರಿಯಾಗಿದ್ದು, ಕೆಎ19 ಎಬಿ7217 ನೋಂದಣಿ ಸಂಖ್ಯೆಯ ಅಟೋ ರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ 2 ಕಪ್ಪು ಬಣ್ಣದ ಪಾಸ್ಟಿಕ್ ಕವರಿನಲ್ಲಿ ಒಟ್ಟು 2,280/- ರೂಪಾಯಿ ಮೌಲ್ಯದ 180 ಎಂ ಎಲ್ ಒರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ ಎಂಬ ಹೆಸರಿನ 24 ಪೌಚ್ ಗಳು ಪತ್ತೆಯಾಗಿದೆ. ಇನ್ನೊಂದು ಪ್ಲಾಸ್ಟಿಕ್ ಕವರಿನಲ್ಲಿ 600 ರೂಪಾಯಿ ಮೌಲ್ಯದ 90 ಎಂ ಎಲ್ ಮೈಸೂರ್ ಲ್ಯಾನ್ಸರ್ ವಿಸ್ಕಿ ಎಂಬ ಹೆಸರಿನ 12 ಪೌಚ್ ಗಳಲ್ಲಿ 1.080 ಲೀಟರ್ ಮದ್ಯ ಪತ್ತೆಯಾಗಿದೆ.
ವಶಪಡಿಸಿಕೊಂಡ ಒಟ್ಟು 5.4 ಲೀಟರ್ ಮದ್ಯದ ಒಟ್ಟು ಮೌಲ್ಯ 2,880/- ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















0 comments:
Post a Comment