ಮಂಚಿಕಟ್ಟೆ : ಮನೆ ನಿರ್ಮಾಣಕ್ಕೆ ತಂದು ಹಾಕಿದ್ದ ಸೆಂಟ್ರಿಂಗ್ ಶೀಟುಗಳು ಕಳವು - Karavali Times ಮಂಚಿಕಟ್ಟೆ : ಮನೆ ನಿರ್ಮಾಣಕ್ಕೆ ತಂದು ಹಾಕಿದ್ದ ಸೆಂಟ್ರಿಂಗ್ ಶೀಟುಗಳು ಕಳವು - Karavali Times

728x90

21 April 2026

ಮಂಚಿಕಟ್ಟೆ : ಮನೆ ನಿರ್ಮಾಣಕ್ಕೆ ತಂದು ಹಾಕಿದ್ದ ಸೆಂಟ್ರಿಂಗ್ ಶೀಟುಗಳು ಕಳವು

ಬಂಟ್ವಾಳ, ಎಪ್ರಿಲ್ 21, 2026 (ಕರಾವಳಿ ಟೈಮ್ಸ್) : ಮನೆ ನಿರ್ಮಾಣಕ್ಕಾಗಿ ಸೆಂಟ್ರಿಂಗ್ ಕೆಲಸದ ಸಲುವಾಗಿ ತಂದು ಹಾಕಿದ್ದ ಸೆಂಟ್ರಿಂಗ್ ಶೀಟುಗಳು ಕಳವಾದ ಘಟನೆ ಮಂಚಿ ಗ್ರಾಮದ ಮಂಚಿಕಟ್ಟೆ ಎಂಬಲ್ಲಿ ಎಪ್ರಿಲ್ 17 ರಂದು ಬೆಳಕಿಗೆ ಬಂದಿದೆ. 

ಈ ಬಗ್ಗೆ ಮಂಚಿ ಗ್ರಾಮದ ಬಾಲಾಜಿಬೈಲು ನಿವಾಸಿ ಚಂದ್ರಶೇಖರ್ (38) ಅವರು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಇವರು ಮತ್ತು ಫಾರೂಕ್ ಎಂಬವರು ಜೊತೆಯಾಗಿ ಸೆಂಟ್ರಿಂಗ್ ಕಾಂಟ್ರಾಕ್ಟ್ ಕೆಲಸ ಮಾಡಿಕೊಂಡಿದ್ದು ಮಂಚಿ ಗ್ರಾಮದ ಮಂಚಿಕಟ್ಟೆ ಎಂಬಲ್ಲಿಯ  ರಶೀದ್ ಎಂಬವರ ಮನೆ ನಿರ್ಮಾಣದ ಸೆಂಟ್ರಿಂಗ್ ಕೆಲಸದ ಕಾಂಟ್ರಾಕ್ಟ್ ಪಡೆದು ಎಪ್ರಿಲ್ 15 ರಿಂದ ಮನೆಯ ಸ್ಲ್ಯಾಪಿನ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದು ಮನೆಯ ಕೆಲಸಕ್ಕೆ ಎಂದು 60 ಸೆಂಟ್ರಿಂಗ್ ಶೀಟುಗಳನ್ನು ರಶೀದ್ ಅವರ ಮನೆಯ ಬಳಿಯ ಕಚ್ಚಾ ಮಣ್ಣು ರಸ್ತೆ ಬದಿಯಲ್ಲಿ ಎಪ್ರಿಲ್ 15 ರಂದು ಮಧ್ಯಾಹ್ನ 12 ಗಂಟೆಗೆ ತಂದಿರಿಸಿದ್ದು, ಆ ದಿನವೇ 20 ಶೀಟುಗಳನ್ನು ಸೆಂಟ್ರಿಂಗ್ ಹಾಕಿ ನಿಲ್ಲಿಸಿ ಉಳಿದಿರುವ 40 ಶೀಟುಗಳನ್ನು ಕೆಲಸ ಮಾಡುವ ಸ್ಥಳದಲ್ಲಿ ಇಟ್ಟು ಹೋಗಿದ್ದಾರೆ. ಎಪ್ರಿಲ್ 16 ರಂದು ಸೈಟಿಗೆ ಬಂದು ಕೆಲಸ ಮುಗಿಸಿ ಸಂಜೆ 5 ಗಂಟೆಗೆ ಹೋಗುವಾಗ ಸದ್ರಿ ಶೀಟುಗಳು ಅಲ್ಲೇ ಇತ್ತು. ಎಪ್ರಿಲ್ 17 ರಂದು ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ಬಂದಾಗ ಸದ್ರಿ ಶೀಟುಗಳು ಇರಿಸಿದ ಸ್ಥಳದಲ್ಲಿ ಇರದೇ ಕಳುವಾಗಿದ್ದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದಾರೆ. ಕಳವಾದ 40 ಕಬ್ಬಿಣದ ಸೆಂಟ್ರಿಂಗ್ ಶೀಟುಗಳ ಮೌಲ್ಯ 35 ಸಾವಿರ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. 

ಚಂದ್ರಶೇಖರ್ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಂಚಿಕಟ್ಟೆ : ಮನೆ ನಿರ್ಮಾಣಕ್ಕೆ ತಂದು ಹಾಕಿದ್ದ ಸೆಂಟ್ರಿಂಗ್ ಶೀಟುಗಳು ಕಳವು Rating: 5 Reviewed By: karavali Times
Scroll to Top