ಬಂಟ್ವಾಳ, ಮೇ 07, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು-ಆಲಡ್ಕದ ಎಸ್ ಎಸ್ ಆಡಿಟೋರಿಯಂನಲ್ಲಿ ಮೇ 12 ರಂದು ಮಂಗಳವಾರ ಇಡೀ ದಿನ ನಡೆಯುವ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಪ್ರಚಾರ ಪೋಸ್ಟರನ್ನು ಮಾಜಿ ಸಚಿವ ಬಿ ರಮಾನಾಥ ರೈ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಉಪಾಧ್ಯಕ್ಷರಾದ ಯು ಮುಸ್ತಫಾ, ಯೂಸುಫ್ ಕರಂದಾಡಿ, ಪ್ರಧಾನ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ, ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ ಎಂ ಅಶ್ರಫ್ ಪಾಣೆಮಂಗಳೂರು, ಪದಾಧಿಕಾರಿಗಳಾದ ಮುಹಮ್ಮದ್ ನಂದಾವರ, ಇಬ್ರಾಹಿಂ ಕೈಲಾರ್, ಹನೀಫ್ ಬಗ್ಗುಮೂಲೆ, ಸಮದ್ ಕೈಕಂಬ, ಇಬ್ರಾಹಿಂ ಮಂಚಿ ಮೊದಲಾದವರು ಉಪಸ್ಥಿತರಿದ್ದರು.












0 comments:
Post a Comment