ಮಂಗಳೂರು, ಮೇ 27, 2026 (ಕರಾವಳಿ ಟೈಮ್ಸ್) : ಬೈಕ್ ಕಳ್ಳತನ ಬೇಧಿಸಿದ ಮುಲ್ಕಿ ಪೊಲೀಸರು ಬೈಕ್ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತರನ್ನು ಸುರತ್ಕಲ್-ಮುಕ್ಕ ಜೆ ಎಮ್ ರೋಡ್ ನ್ಯೂ ಹೌಸ್ ನಿವಾಸಿ ಉಮ್ಮರಬ್ಬ ಅವರ ಪುತ್ರ ಮೊಹಮ್ಮದ್ ರಾಝಿಕ್ (36) ಹಾಗೂ ಬೈಕಂಪಾಡಿ ಅಂಗರಗುಂಡಿ ನಿವಾಸಿ ಬಿ ಬಾವಾ ಅವರ ಪುತ್ರ ಉಬೈದತ್ ಹೈದರ್ (31) ಎಂದು ಹೆಸರಿಸಲಾಗಿದೆ.
ಮೇ 18 ರಂದು ಮುಲ್ಕಿ ಪೆÇಲೀಸ್ ಠಾಣಾ ವ್ಯಾಪ್ತಿಯ ಮುಲ್ಕಿ ಜಂಕ್ಷನ್ ಬಳಿ ಅಪೆÇೀಲೊ ಫಾರ್ಮಾ ಹತ್ತಿರ ನಿಲ್ಲಿಸಿದ ಹೋಂಡಾ ಯುನಿಕಾರ್ನ್ (ಕೆಎ 20 ಇಬಿ 6383) ಬೈಕನ್ನು ಕಳ್ಳತನ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೇಧಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ ಸುಮಾರು 20 ಸಾವಿರ ರೂಪಾಯಿ ಮೌಲ್ಯದ ಕಳವುಗೈದ ಬೈಕ್ ಹಾಗೂ ಸುಮಾರು 18 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಪೆÇೀನುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮುಲ್ಕಿ ಠಾಣಾ ಪಿಎಸ್ಸೈ ಹಾಗೂ ಕ್ರೈಂ ತಂಡ ಈ ಕಾರ್ಯಾಚರಣೆ ನಡೆಸಿದೆ.
ಬಂಧಿತ ಆರೋಪಿಗಳ ಪೈಕಿ ಮೊಹಮ್ಮದ್ ರಾಝಿಕ್ ವಿರುದ್ದ ಸುರತ್ಕಲ್, ಪಣಂಬೂರು ಹಾಗೂ ಮುಲ್ಕಿ ಠಾಣೆಗಳಲ್ಲಿ ವಿವಿಧ ಪ್ರಕರಣ ದಾಖಲಾಗಿದೆ. ಉಬೈದತ್ ಹೈದರ್ ವಿರುದ್ದ ಪಣಂಬೂರು ಪೊಲೀಸ್ ಠಾಣೆಯಲ್ಲಿ ವಿವಿಧ ಕಲಂಗಳಡಿ 4 ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.






















0 comments:
Post a Comment