ನಾವೂರು : ಲಾರಿ ಚಾಲಕನಿಂದ ಹಿಟ್ ಆಂಡ್ ರನ್, ಬೈಕ್ ಸವಾರರಿಬ್ಬರು ಆಸ್ಪತ್ರೆಗೆ - Karavali Times ನಾವೂರು : ಲಾರಿ ಚಾಲಕನಿಂದ ಹಿಟ್ ಆಂಡ್ ರನ್, ಬೈಕ್ ಸವಾರರಿಬ್ಬರು ಆಸ್ಪತ್ರೆಗೆ - Karavali Times

728x90

24 May 2026

ನಾವೂರು : ಲಾರಿ ಚಾಲಕನಿಂದ ಹಿಟ್ ಆಂಡ್ ರನ್, ಬೈಕ್ ಸವಾರರಿಬ್ಬರು ಆಸ್ಪತ್ರೆಗೆ

ಬಂಟ್ವಾಳ, ಮೇ 24, 2026 (ಕರಾವಳಿ ಟೈಮ್ಸ್) : ಲಾರಿಯೊಂದು ಹಿಟ್ ಆಂಡ್ ರನ್ ನಡೆಸಿದ ಪರಿಣಾಮ ಬೈಕ್ ಸವಾರರಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಾವೂರು ಗ್ರಾಮದ ಬಡಗುಂಡಿ ಎಂಬಲ್ಲಿ ಮೇ 23 ರಂದು ಬೆಳಿಗ್ಗೆ ಸಂಭವಿಸಿದೆ. 

ಗಾಯಗೊಂಡ ಬೈಕ್ ಸವಾರರನ್ನು ಕಾಸರಗೋಡು ಗ್ರಾಮದ ಏನ್ಮಕಜೆ ನಿವಾಸಿ ಮನೋಹರ್ ಪ್ರಸಾದ್ ಪಿ ಹಾಗೂ ವತ್ಸಕುಮಾರ್ ಎಂದು ಹೆಸರಿಸಲಾಗಿದೆ. ವತ್ಸಕುಮಾರ್ ಚಲಾಯಿಸುತ್ತಿದ್ದ ಬೈಕಿನಲ್ಲಿ ಮನೋಹರ್ ಪ್ರಸಾದ್ ಅವರು ಸಹಸವರರಾಗಿ ಬಿ ಸಿ ರೋಡು ಬಸ್ಸು ನಿಲ್ದಾಣದಿಂದ ವಗ್ಗ ಕಡೆಗೆ ಸಂಚರಿಸುತ್ತಿದ್ದ ವೇಳೆ ಮುಂಜಾನೆ ಸುಮಾರು 5.45ರ ವೇಳೆಗೆ ನಾವೂರು ಗ್ರಾಮದ ಬಡಗುಂಡಿ ಎಂಬಲ್ಲಿಗೆ ತಲುಪಿದಾಗ ಎದುರುಗಡೆ ಅಂದರೆ ವಗ್ಗ ಕಡೆಯಿಂದ ಬಂದ ಅಪರಿಚಿತ ಲಾರಿ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ಬಳಿಕ ಲಾರಿ ಚಾಲಕ ಲಾರಿ ನಿಲ್ಲಿಸದೆ ಗಾಯಾಳುಗಳನ್ನು ಉಪಚರಿಸದೆ ಪರಾರಿಯಾಗಿದ್ದಾನೆ. 

ಅಪಘಾತದಿಂದ ಸವಾರರಿಬ್ಬರು ಗಾಯಗೊಂಡಿದ್ದು, ಅವರನ್ನು ಸ್ಥಳೀಯರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ನಾವೂರು : ಲಾರಿ ಚಾಲಕನಿಂದ ಹಿಟ್ ಆಂಡ್ ರನ್, ಬೈಕ್ ಸವಾರರಿಬ್ಬರು ಆಸ್ಪತ್ರೆಗೆ Rating: 5 Reviewed By: karavali Times
Scroll to Top