ಬಂಟ್ವಾಳ, ಮೇ 05, 2026 (ಕರಾವಳಿ ಟೈಮ್ಸ್) : ಕುರಿಯಾಳ ಗ್ರಾಮದ ಸೊರ್ನಾಡು ಎಂಬಲ್ಲಿ ಟಿಪ್ಪರ್ ಡಿಕ್ಕಿ ಹೊಡೆದು ಕಾರು ಜಖಂಗೊಂಡ ಘಟನೆ ಎಪ್ರಿಲ್ 29 ರಂದು ಸಂಭವಿಸಿದೆ.
ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ನಿವಾಸಿ ಎಂ ಎಸ್ ನಝೀಮ್ಮುದ್ದೀನ್ ಅವರು ಎ 29 ರಂದು ಇನ್ನೋವಾ ಕಾರಿನಲ್ಲಿ ಅವರ ಹೆಂಡತಿ ಅಸ್ಮ ಅವರೊಂದಿಗೆ ಮಂಗಳೂರು ಆಸ್ಪತ್ರೆಗೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ಸು ಮನೆ ಕಡೆಗೆ ಬಂಟ್ವಾಳದಿಂದ ಮೂಡುಬಿದರೆ ರಸ್ತೆಯಲ್ಲಿ ಬರುತ್ತಿರುವಾಗ ಕುರಿಯಾಳ ಗ್ರಾಮದ ಸೊರ್ನಾಡು ಜಂಕ್ಷನ್ ತಲುಪಿದಾಗ ಮಧ್ಯಾಹ್ನ 3.30 ಗಂಟೆಗೆ ಮೂಡುಬಿದರೆ ಕಡೆಯಿಂದ ಬಂಟ್ವಾಳ ಕಡೆಗೆ ಬರುತ್ತಿದ್ದ ಟಿಪ್ಪರ್ ಚಾಲಕ ಯಾವುದೇ ಸೂಚನೆ ನೀಡದೆ ಏಕಾಏಕಿ ಕುಪ್ಪೆಪದವು ರಸ್ತೆ ಕಡೆಗೆ ತಿರುಗಿಸಿದ ಪರಿಣಾಮ ಕಾರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಯಾರಿಗೂ ಯಾವುದೇ ಗಾಯ ನೋವುಗಳಾಗಿರುವುದಿಲ್ಲ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment