ಬಂಟ್ವಾಳ, ಮೇ 05, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಪಿತ್ತಿಲಗುಡ್ಡೆ ನಿವಾಸಿ ಮರ್‍ಹೂಂ ಪಿ.ಎ. ಹಸನ್ ಅವರ ಪುತ್ರ ಮುಹಮ್ಮದ್ ಇರ್ಶಾದ್ ಅವರ ವಿವಾಹವು ಪಾಣೆಮಂಗಳೂರು ಸಮೀಪದ ನಂದಾವರ ನಿವಾಸಿ ಮರ್‍ಹೂಂ ಇಸ್ಮಾಯಿಲ್ ಅವರ ಪುತ್ರಿ ಆಯಿಷಾ ಸುನೈನಾ ಎಂಬ ವಧುವಿನೊಂದಿಗೆ ಹಾಗೂ ಇಸ್ಮಾಯಿಲ್ ಅವರ ಪುತ್ರ ಉಮರ್ ಫಾರೂಕ್ ಅವರ ವಿವಾಹವು ಮಳಲಿ-ಮರವೂರು ನಿವಾಸಿ ಹಮೀದ್ ಅವರ ಪುತ್ರಿ ಫಾತಿಮಾ ಝೊಹರಾ ಎಂಬ ವಧುವಿನೊಂದಿಗೆ ಪಾಣೆಮಂಗಳೂರು-ಅಕ್ಕರಂಗಡಿಯ ಎಚ್.ಎಚ್. ಈವೆಂಟ್ಸ್ ಆಂಡ್ ಕನ್ವೆನ್ಷನ್ ಸಭಾಂಗಣದಲ್ಲಿ ಮೇ 4 ರಂದು ಸೋಮವಾರ ನೆರವೇರಿತು.
ವಿವಾಹ ಕಾರ್ಯಕ್ರಮದಲ್ಲಿ ಹಲವು ಮಂದಿ ಗಣ್ಯರು, ಕುಟುಂಬ ಬಂಧುಗಳು ಹಾಗೂ ಹಿತೈಷಿಗಳು ಭಾಗವಹಿಸಿ ನೂತನ ವಧೂ-ವರರಿಗೆ ಶುಭ ಹಾರೈಸಿದರು.























0 comments:
Post a Comment