ಬಂಟ್ವಾಳ, ಮೇ 05, 2026 (ಕರಾವಳಿ ಟೈಮ್ಸ್) : ಮಾದಕ ವಸ್ತು ಸೇವನೆ ಮಾಡಿದ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಮೇ 1 ರಂದು ರಾತ್ರಿ ಬಂಧಿಸಿದ್ದಾರೆ.
ಬಂಧಿತರನ್ನು ವಿಟ್ಲ ಕಸಬಾ ಗ್ರಾಮದ ನಿವಾಸಿಗಳಾದ ಅನ್ವರ್ ಸಾದಿಕ್ (34) ಹಾಗೂ ಇಮ್ರಾನ್ (31) ಎಂದು ಹೆಸರಿಸಲಾಗಿದೆ. ಆರೋಪಿಗಳು ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಮೇ 1 ಎಂದು ರಾತ್ರಿ ಪೊಲೀಸರು ಒಕ್ಕೆತ್ತೂರು ಚಿಕನ್ ಸೆಂಟರ್ ಬಳಿ ಬಂದಾಗ ಆರೋಪಿಗಳು ಸಿಕ್ಕಿದ್ದಾರೆ.
ಆರೋಪಿಗಳನ್ನು ಠಾಣೆಗೆ ಕರೆತಂದು ಪಿಎಸ್ಸೈ ರಾಮಕೃಷ್ಣ ಅವರ ಮುಂದೆ ಹಾಜರುಪಡಿಸಿ, ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರುಗಳು ನಿಷೇಧಿತ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿರುತ್ತದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment